Wednesday, January 22, 2025

ಕಾರ್ತೀಕ ಮಾಸದಲ್ಲಿ ‘ಗಣಾಧಿಪ ಮಹಾಗಣಪತಿ’ ಆರಾಧನೆಯನ್ನು ಹೇಗೆ ಮಾಡಬೇಕು?

ಬೆಂಗಳೂರು : ಸಕಲ ಕಾರ್ಯಗಳಲ್ಲು ಯಶಸ್ಸು, ಕೀರ್ತಿಯನ್ನು ಪಡೆಯಲು ಶ್ರೀ ಮಹಾಗಣಪತಿ  ಆರಾಧನೆಯನ್ನು ಮಾಡಬೇಕು. ಶ್ರೀಗಣೇಶನ ಆರಾಧನೆಯಿಂದ ಸಕಲ ವಿಘ್ನ ಭಾದೆಗಳು ದೂರವಾಗುತ್ತವೆ ಎಂದು ಸಿದ್ಧಲಿಂಗೇಶ್ವರ ಗದ್ದುಗೆ ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

ಈ ಕುರಿತು ಪವರ್​ ಟಿವಿಗೆ ಪ್ರತಿಕ್ರಿಯಿಸಿರುವ ಶ್ರೀಗಳು, ಪ್ರತಿ ಮಾಸದಲ್ಲೂ ಬರುವ ಬಹಳ ಚತುರ್ಥಿಯನ್ನು ಸಂಕಷ್ಟಹರ ಚುತುರ್ಥಿ ಎಂದು ಆದಿನ ಗಣೇಶನನ್ನು ವಿಶೇಷವಾಗಿ ಶ್ರದ್ಧಾಭಕ್ತಿಗಳಿಂದ ಆರಾಧನೆಯನ್ನು ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಜಗತ್ತಿನ ಹಲವಾರು ದೇಶಗಳು ಶ್ರೀಗಣೇಶನನ್ನು ನಾನಾ ಹೆಸರುಗಳಿಂದ ಆರಾಧನೆಯನ್ನು ಮಾಡುತ್ತಾ ಬರುತ್ತಿದ್ದಾರೆ. ಇನ್ನು ಹಲವಾರು ಮಾಸಗಳಲ್ಲಿ ಗಣೇಶನನ್ನು ಹಲವು ಹೆಸರುಗಳಿಂದ ಕರೆಯುತ್ತಾರೆ. ಈ ಕಾರ್ತಿಕ ಮಾಸದಲ್ಲಿ ಗಣಾಧಿಪ ಮಹಾಗಣಪತಿ ಎಂಬ ಹೆಸರಿನಿಂದ ಪೂಜಿಸಲಾಗುತ್ತದೆ ಎಂದು ಆಶೀರ್ವಚನ ನೀಡಿದ್ದಾರೆ.

ಕಾರ್ತೀಕ ಮಾಸದ ಗಣಾಧಿಪ ಮಹಾಗಣಪತಿ ಪೂಜೆಗೆ ಸಿದ್ಧತೆ ಹೇಗೆ ಮಾಡಬೇಕು?

ಗಣಾಧಿಪ ಮಹಾಗಣಪತಿ ಆರಾಧನೆಯನ್ನು ಹೇಗೆ ಮಾಡಬೇಕು?

  • ಅಭ್ಯಂಜನ ಸ್ನಾನವನ್ನು ಮಾಡಿ
  • ಗುರುಹಿರಿಯರಿಂದ ಆಶೀರ್ವಾದವನ್ನು ಪಡೆಯಿರಿ.
  • ಓಂ ಗಣಾಧಿಪ ಮಹಾಗಣಪತಿಯೇ ನಮಃ ಈ ಮಂತ್ರವನ್ನು ಸಹಸ್ರ ಬಾರಿ ಜಪಿಸಿ.
  • ಕೆಂಪು ಮಿಶ್ರಿತ ಹಳದಿ ವಸ್ತ್ರವನ್ನು ಧರಿಸಿ.
  • ಶ್ರೀಗಂಧವನ್ನು ಮತ್ತು ಗರಿಕೆಯನ್ನು  ಸಮರ್ಪಿಸಿ.
  • ಬಿಲ್ವವನ್ನು ಸಮರ್ಪಿಸಿ.
  • ಮೋದಕ, ಪಾಯಸ, ಕಡುಬು, ಒಬ್ಬಟ್ಟು, ಚಕ್ಕಲಿಗಳನ್ನು ನೈವೇದ್ಯವನ್ನಾಗಿ ಸಮರ್ಪಿಸಿ.
  • 21 ತುಪ್ಪದ ದೀಪಗಳ ಆರತಿ ಮಾಡಿ.

ಪ್ರತಿಯೊಬ್ಬರೂ ರಾಷ್ಟ್ರ ಭಕ್ತಿಯನ್ನು ಬೆಳೆಸಿಕೊಳ್ಳಿ

RELATED ARTICLES

Related Articles

TRENDING ARTICLES