ಬೆಂಗಳೂರು: ಈಗಲೇ ಚಳಿಗಾಲ ಶುರುವಾಗಿದೆ. ಈ ಸೀಸನ್ನಲ್ಲಿ ವಾತಾವರಣವು ದೇಹಕ್ಕೆ ತುಂಬಾ ಕಠಿಣ ಸವಾಲನ್ನು ತಂದು ಆರೊಗ್ಯದಲ್ಲಿ ಏರುಪೇರು ಉಂಟುಮಾಡುತ್ತದೆ ಆದ್ದರಿಂದ ಆರೋಗ್ಯದ ಬಗ್ಗೆ ಣಾವು ಕೊಂಚ ಕಾಳಜಿಯನ್ನು ವಹಿಸಬೇಕು.
ಹೌದು, ಈ ಸಮಯದಲ್ಲಿ ಹೆಚ್ಚಿನ ಅನಾರೋಗ್ಯಗಳು ಬರುವುದು ಮಾತ್ರವಲ್ಲದೆ, ದೈಹಿಕವಾಗಿಯು ಇದು ಹಿಂಡಿಹಿಪ್ಪೆ ಮಾಡುವುದು. ಚಳಿಯಿಂದಾಗಿ ಚರ್ಮದ ಮೇಲೆ ತೀವ್ರ ಪರಿಣಾಮ ಬೀರುವುದು. ಇಷ್ಟು ಮಾತ್ರವಲ್ಲದೆ ಪಾದಗಳು ಕೂಡ ಒಡೆದು ರಕ್ತಸ್ರಾವ ಆಗುವಂತಹ ಪರಿಸ್ಥಿತಿ ನಿರ್ಮಾಣವಾಗುವುದು.
ಇದನ್ನೂ ಓದಿ: ಉತ್ತಮ ಜೀವನಕ್ಕೆ ನಿಮ್ಮ ಆಹಾರ ಪದ್ಧತಿ, ಜೀವನ ಶೈಲಿ ಹೇಗಿರಬೇಕು ಗೊತ್ತಾ?
ಕಾಂತಿಯುತ ಚರ್ಮ ಮತ್ತು ದೇಹವನ್ನು ಆರೋಗ್ಯವಾಗಿಡಲು ಚಳಿಗಾಲದಲ್ಲಿ ಪಾಲಿಸಬೇಕಾದ ಕೆಲವು ಆರೋಗ್ಯ ಸಲಹೆಗಳು ಈ ಕೆಳಗಿನಂನೆ ಇವೆ.
- ಆರೋಗ್ಯ ಹೆಚ್ಚಿನ ಆದ್ಯತೆ ನೀಡಿ
- ಹೆಚ್ಚು ನೀರು ಕುಡಿಯುವ ಅಭ್ಯಾಸವನ್ನು ರೊಢಿಸಿಕೊಳ್ಳಿ.
- ಒಳ್ಳೆಯ ನಿದ್ರೆ ಮಾಡುವುದು ಉತ್ತಮ
- ಆರೋಗ್ಯಕಾರಿ ಆಹಾರ ಸೇವಿಸಿ, ಸಸ್ಯಾಹಾರ ಕಡೆ ಗಮನಹರಿಸಿ
- ಹೆಚ್ಚು ಸಮಯ ಸ್ನಾನ ಮಾಡಬೇಡಿ
- ಒಳ್ಳೆಯ ವ್ಯಾಯಾಮ ಮಾಡಿ
- ಬೆಚ್ಚನೆಯ ಬಟ್ಟೆಗಳನ್ನು ಧರಿಸಿ
ನೀವು ಈ ಮೇಲಿನ ವಿಧಾನವನ್ನು ಫಾಲೋ ಮಾಡಿದ್ರೆ ನಾವು ಆರೋಗ್ಯದ ಬಗ್ಗೆ ಕಾಳಜಿ ಮಾಡಬಹುದು.