Sunday, December 22, 2024

ಕಾಂಗ್ರೆಸ್​ ಸರ್ಕಾರಕ್ಕೆ ಶಾಕ್​: ರಾಜೀನಾಮೆ ನೀಡಲು ಮುಂದಾದ ಶಾಸಕ!

ಬೆಂಗಳೂರು: ಗ್ರಾಮೀಣಾಭಿವೃದ್ಧಿ ಕೆಲಸಗಳು ವಿಳಂಬವಾದ ಹಿನ್ನೆಲೆ ಬೇಸರಗೊಂಡ ಶಾಸಕ B.R.ಪಾಟೀಲ್,
ತಮ್ಮ ಕ್ಷೇತ್ರದಲ್ಲಿನ ಅಭಿವೃದ್ಧಿ ಕಾಮಗಾರಿಗಳು ವಿಳಂಬವಾಗುತ್ತಿವೆ ಇದರಿಂದ ನನಗೆ ತುಂಬಾ ಬೇಸರವಾಗಿದೆ. ನಾನು ರಾಜೀನಾಮೆ ನೀಡಲು ಸಿದ್ಧ ಎಂದು ಸಿಎಂ ಸಿದ್ದರಾಮಯ್ಯರಿಗೆ ಪತ್ರ ಬರೆದಿದ್ದಾರೆ.

ಈ ಪತ್ರದಲ್ಲಿ, ತಾವು ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದ್ದೀರಿ, ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ ಕಾಮಗಾರಿ ಮಾಡುವ ಜವಾಬ್ದಾರಿ ನೀಡಿದ್ದೆ. ಆದರೆ ಕಾಮಗಾರಿ ವಿಳಂಬವಾಗ್ತಿದೆ. ಮಾಡಿರುವ ಕಾಮಗಾರಿಗಳು ಅರ್ಧಂಬರ್ಧ ಆಗಿವೆ. ಕೆಲವು ಕಳಪೆ ಕಾಮಗಾರಿಗಳೂ ನಡೆದಿವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಡಿಕೆಶಿ ಪ್ರಕರಣ ವಾಪಾಸ್​: ಸರ್ಕಾರದ ನಡೆ ಪ್ರಶ್ನಿಸಿ ಯತ್ನಾಳ್​​ ಹೈಕೋರ್ಟ್​ ಮೊರೆ

2018ರ ನಂತರ ಬಂದ ಬಿಜೆಪಿ ಅಭಿವೃದ್ಧಿ ಬಗ್ಗೆ ಗಮನಹರಿಸಿಲ್ಲ. ಇದರ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಗಮನಕ್ಕೆ ತರಲಾಗಿತ್ತು. ಸಭೆ ಮಾಡುವುದಾಗಿ ಅವರು ಹೇಳಿದ್ದರು. ಆದರೆ ಕಾರಣಾಂತರಗಳಿಂದ ಸಭೆ ಮಾಡಲಾಗಿಲ್ಲ. ಈಗ ಚಳಿಗಾಲದ ಅಧಿವೇಶನ ಬೇರೆ ಬರುತ್ತಿದೆ. ಹಾಗಾಗಿ ಯಾವ ಮುಖ ಹೊತ್ತು ಬರಬೇಕು ಎಂದು  ತಮ್ಮ ಪತ್ರದಲ್ಲಿ ಬೇಸರ ಹೊರಹಾಕಿದ್ದಾರೆ.

RELATED ARTICLES

Related Articles

TRENDING ARTICLES