Saturday, June 29, 2024

ನಾವು ವಿಲನ್​ಗಳೇ ಬಿಡಿ, ಹಿರೋ ಅಲ್ಲ.. ಆದ್ರೆ, ನಿಯತ್ತಾಗಿ ಮಾತನಾಡ್ತಿವಿ : ಡಿ ಬಾಸ್ ಡಿಚ್ಚಿ ಕೊಟ್ಟಿದ್ದು ಯಾರಿಗೆ?

ಬೆಂಗಳೂರು : ಅದು ಬಜಾರ್ ಹುಡ್ಗ ನಟ ಧನ್ವೀರ್ ನಟನೆಯ ‘ಕೈವ’ ಸಿನಿಮಾ ಪ್ರೀ-ರಿಲೀಸ್ ಈವೆಂಟ್‌. ಈ ಅದ್ದೂರಿ ವೇದಿಕೆಗೆ ಬಂದಿದ್ದ ಡಿ ಬಾಸ್ ಒಮ್ಮೆಲೇ ಫೈರ್ ಆದರು. ಎಂದಿನಂತೆ ತಮ್ಮ ನೇರ ಮಾತಿನ ಮೂಲಕವೇ ಕೆಲವರಿಗೆ ಡಿಚ್ಚಿ ಕೊಟ್ಟರು. ಅದು ಕನ್ನಡ ಸಿನಿಮಾ ಉಳಿವಿಗಾಗಿ ಅನ್ನೋದು ಮತ್ತೊಂದು ವಿಷಯ.

ವೇದಿಕೆಯಲ್ಲಿ ಮಾತು ಆರಂಭಿಸಿದ ದರ್ಶನ್ ಅವರು, ಕಾವೇರಿ ವಿಚಾರಕ್ಕೆ ಬರೋಣ ಅಂದ್ರು. ಅಲ್ಲೇ ನೋಡಿ ದರ್ಶನ್ ಬೆಂಕಿಯುಗುಳಿದ್ದು. ಅವತ್ತು ನಾನು ಕಾವೇರಿ ವಿಚಾರವಾಗಿ ಮಾತನಾಡಿದಾಗ ದೊಡ್ಡ ತಪ್ಪಾಗಿ ಕಾಣಿಸ್ತು. ನಾವು ವಿಲನ್​ಗಳೇ ಬಿಡಿ, ಹಿರೋಗಳಲ್ಲ. ಆದ್ರೆ, ನಾವು ನಿಯತ್ತಾಗಿ ಮಾತನಾಡುತ್ತೇವೆ. ಬೇರೆ ಯಾರಾದರೂ ಇದರ ಬಗ್ಗೆ ಒಂದು ಮಾತು ಎತ್ತಿದ್ರಾ? ಯಾಕೆ ಅವರಿಗೆ ಸಂಬಂಧನೇ ಇಲ್ವಾ? ಬರೀ ಪ್ರಮೋಷನ್ ಮಾತ್ರನಾ? ಎಂದು ಮನಸ್ಸಲ್ಲಿ ಇದ್ದಿದ್ದನ್ನು ಹೊರಹಾಕಿದರು.

ದಯಮಾಡಿ ಕನ್ನಡ ಸಿನಿಮಾ ನೋಡಿ. ಸ್ವಾರ್ಥ ಆದ್ರೂ ಅಂದುಕೊಳ್ಳಿ, ಹೊಟ್ಟೆ ಉರಿ ಆದ್ರೂ ಅಂದುಕೊಳ್ಳಿ. ಏನು ಬೇಕಾದರೂ ಅಂದುಕೊಳ್ಳಿ. ಅಕ್ಕಪಕ್ಕದ ರಾಜ್ಯದವರು ಮೊದಲು ಚಕ್ಕೂರು ಹತ್ತಿರ ಸಿನಿಮಾ ಪ್ರಮೋಷನ್ ಮಾಡ್ತಾ ಇದ್ರು, ಇನ್ಮುಂದೆ ಇಲ್ಲಿಗೂ ಬರ್ತಾರೆ. ನಾವು ಇಲ್ಲಿಂದ ಆಚೆ ಹೊರಟು ಹೋಗ್ತಿವಿ. ಫಸ್ಟ್ ನಮ್ಮ ತಾಯಿನ ನಾವು ಪ್ರೀತಿಸಬೇಕು, ಆಮೇಲೆ ಪಕ್ಕದವರ ತಾಯಿನ ನೋಡೋಣ. ನಾನು ಪ್ರೀತಿಸಬೇಡಿ ಅಂತ ಹೇಳ್ತಿಲ್ಲ, ಅದೂ ತಪ್ಪಾಗುತ್ತೆ. ಆದ್ರೆ, ನಮ್ಮ ತಾಯಿನ ಫಸ್ಟ್ ನೋಡಿಕೊಳ್ಳೋಣ. ನಮ್ಮ ತಾಯಿನಾ ಏನಾದ್ರೂ ಅಂದ್ರೆ ಬಿಟ್ಬಿಡ್ತೀವಾ? ಇಲ್ಲ.. ನಮ್ಮ ತಾಯಿ ಬಗ್ಗೆ ಹೇಳಿದಾಗ ಅವರು ಯಾರಾದರೂ ಒಬ್ಬರು ಮಾತನಾಡ್ತಾರಾ? ಎಂದು ಗುಡುಗಿದರು.

ನಾನು ಜೂನಿಯರ್, ಚಿಕ್ಕಣನೇ ಸೀನಿಯರ್

ಹಾಗೇ ಮಾತು ಮುಂದುವರಿಸಿದ ದರ್ಶನ್ ನಟ ಚಿಕ್ಕಣರ ಕಾಲೆಳೆದರು. ನನ್ನ ತಮ್ಮ ಅಭಿ ಬ್ಯಾಡ್ ಮ್ಯಾನರ್ಸ್​ ಚಿತ್ರಕ್ಕೆ ಬೆಂಬಲ ನೀಡಿದ್ದೀರಿ, ಈಗ ಧನ್ವಿರ್​ ಕೈವ ಬರ್ತಾ ಇದೆ. ಆಮೇಲೆ ಚಿಕ್ಕಣ ಅವರ ಉಪಾಧ್ಯಕ್ಷ ಮೂವಿ ಬರುತ್ತೆ. ಚಿಕ್ಕಣ ಹೇಳಿದ್ರು ನಾನು ಜೂನಿಯರ್ ಅಂತಾ. ನೋ.. ನಮ್ಮದು 50 ಸಿನಿಮಾ ಸ್ವಾಮಿ. ಚಿಕ್ಕಣ್ಣ 250 ಸಿನಿಮಾ ಮಾಡಿದ್ದಾರೆ. ಈಗ ಜೂನಿಯರ್ ಯಾರು? ಸೀನಿಯರ್ ಯಾರು? ನೀವೆ ಹೇಳಬೇಕು. ಈಗ ನಾನು ಜೂನಿಯರ್ ಅಲ್ವಾ ಸ್ವಾಮಿ. ನೀವು ಸೀನಿಯರ್ ಸ್ವಾಮಿ. ನೀವು ತೋರಿಸಿದ ದಾರಿಯಲ್ಲಿ ನಾವು ನಡೆಯುತ್ತಿದ್ದೇವೆ. ನೀವು ಇದೇ ರೀತಿ ಮುಂದೆ ನಡೆದುಕೊಂಡು ಹೋದ್ರೆ ನಾವೆಲ್ಲಾ ನಿಮ್ಮ ಹಿಂದೆ ಇರ್ತಿವಿ ಎಂದಾಗ ಚಿಕ್ಕಣ್ಣ, ಅಭಿಷೇಕ್ ಹಾಗೂ ಧನ್ವೀರ್​ ನಗೆಗಡಲಲ್ಲಿ ತೇಲಾಡಿದರು.

ಯಾವ್ ನನ್ಮಗ ಬಂದು ಪಿನ್ ಇಟ್ರೂ!

ಬೇಜಾರ ಮಾಡ್ಕೊಳ್ಳಬೇಡಿ.. ದಯವಿಟ್ಟು ಹಿತ್ತಾಳೆ ಕಿವಿ ಮಾಡಿಕೊಳ್ಳಬೇಡಿ. ನಿಮ್ಮ ನಂಬರ್ ಅವರ ಹತ್ತಿರ, ಅವರ ನಂಬರ್ ನಿಮ್ಮ ಹತ್ತಿರ ಇರುತ್ತೆ. ಯಾವ್ ನನ್ ಮಗ ಬಂದು ಪಿನ್ ಇಟ್ರೂ ಸಹ ಏನಪ್ಪ ಅಂದೆ ಅಂತ ಒಂದೇ ಒಂದು ಕಾಲ್ ಮಾಡಿ ಕೇಳಿ. ಅಲ್ಲೇ ಎಲ್ಲಾ ಕ್ಲಿಯರ್ ಆಗುತ್ತೆ. ನಿಮ್ಮ ಮೇಲೆ ಯಾರ ಕಣ್ಣು ಬೀಳದಿರಲಿ ಎಂದು ಅಭಿ, ಧನ್ವೀರ್ ಹಾಗೂ ಚಿಕ್ಕಣರಿಗೆ ಶುಭ ಹಾರೈಸಿದರು.

RELATED ARTICLES

Related Articles

TRENDING ARTICLES