Wednesday, January 22, 2025

ತೆಲಂಗಾಣ ರೈತರಿಗೆ ಶಾಕ್​ ನೀಡಿದ ಚುನಾವಣಾ ಆಯೋಗ!

ತೆಲಂಗಾಣ: ರೈತ ಬಂಧು ಯೋಜನೆಯಡಿ ಆರ್ಥಿಕ ನೆರವು ವಿತರಿಸಲು ತೆಲಂಗಾಣ ಸರ್ಕಾರಕ್ಕೆ ನೀಡಿದ್ದ ಅನುಮತಿಯನ್ನು ಇಂದು ಭಾರತೀಯ ಚುನಾವಣಾ ಆಯೋಗ ಹಿಂಪಡೆದಿದೆ.

ರೈತ ಬಂಧು ಯೋಜನೆಯಡಿ ಹಣ ವಿತರಣೆ ಕುರಿತು ಸಚಿವ ಟಿ.ಹರೀಶ್ ರಾವ್ ಹೇಳಿಕೆ ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಚುನಾವಣಾ ಪ್ರಚಾರದ ವೇಳೆ ರೈತ ಬಂಧು ಯೋಜನೆಯಡಿ ವಿತರಿಸುತ್ತಿರುವ ಹಣದ ಕುರಿತು ಯಾವುದೇ ಹೇಳಿಕೆ ನೀಡದಂತೆ ಬಿಆರ್‌ಎಸ್‌ ಪಕ್ಷದ ಮುಖಂಡರಿಗೆ ನಿರ್ಬಂಧ ಹೇರುವಂತೆ ಕಾಂಗ್ರೆಸ್‌ ಮುಖ್ಯ ಚುನಾವಣಾ ಆಯುಕ್ತರಿಗೆ ಮನವಿ ಮಾಡಿತ್ತು.

ಇದನ್ನೂ ಓದಿ: ಭ್ರೂಣ ಹತ್ಯೆ ಪ್ರಕರಣ ಬೆನ್ನಲ್ಲೇ ಮೈಸೂರಿನಲ್ಲಿ ಆರೋಗ್ಯ ಇಲಾಖೆ ಅಲರ್ಟ್!

ಬಿಆರ್‌ಎಸ್‌ ನಾಯಕರು ರೈತಬಂಧು ಯೋಜನೆಯ ಹಣವನ್ನು ತಮ್ಮ ಜೇಬಿನಿಂದ ಕೊಡುತ್ತಿರುವ ರೀತಿಯಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಈ ಮೂಲಕ ಯೋಜನೆಯನ್ನು ಜನರನ್ನು ತಮ್ಮತ್ತ ಸೆಳೆಯುವ ಸಾಧನವಾಗಿನ ಉಪಯೋಗಿಸುತ್ತಿದ್ದಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರಿಗೆ ಬರೆದ ಪತ್ರದಲ್ಲಿ ಕಾಂಗ್ರೆಸ್ ದೂರಿತ್ತು.

RELATED ARTICLES

Related Articles

TRENDING ARTICLES