Monday, December 23, 2024

ಸರ್ಕಾರ ಬೀಳಿಸುವಂತಹ ಹುಚ್ಚು ಕೆಲಸ ಬಿಡಿ : ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ: ವಿಪಕ್ಷದ ನಾಯಕ ಛಾಯಾ ಮುಖ್ಯ ಮಂತ್ರಿ ಇದ್ದಂತೆ ಘನತೆಯಿಂದ ಮಾತನಾಡಬೇಕು ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದರು. 

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಬರದ ಪರಿಸ್ಥಿತಿ ಹಿನ್ನೆಲೆಯಲ್ಲಿ ವಿದ್ಯುತ್ ಖರೀದಿ ದುಪ್ಪಟ್ಟು ಮಾಡಲಾಗಿದೆ. ಬಹಳ ಕಷ್ಟ ಅನ್ನುವ ಪರಿಸ್ಥಿತಿ ಈಗ ಇಲ್ಲ. ಭಾಗ್ಯಗಳನ್ನು ಕೊಟ್ಟಿದ್ದೇವೆ ಎಂಬ ನೆಪದಲ್ಲಿ ಜನರಿಗೆ ಬೇರೆ ಸವಲತ್ತುಗಳನ್ನು ಕೊಡುವುದನ್ನು ನಿಲ್ಲಿಸುವುದಿಲ್ಲ ಎಂದರು.

ಇದನ್ನೂ ಓದಿ: ಬೆಂಗಳೂರು ಕಂಬಳ ಗೆದ್ದವರಾರು? ಕೂಟದ ಫೈನಲ್ ಫಲಿತಾಂಶ ಇಲ್ಲಿದೆ ನೋಡಿ

ಬರ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲಿದ್ದೇವೆ’ ಎಂದರು. ಹುಚ್ಚು ಕೆಲಸ ಬಿಡಿ: ‘ಸರ್ಕಾರ ಬೀಳಿಸುತ್ತೇವೆ ಅನ್ನೋದು, ಅನಗತ್ಯ ಟೀಕೆ ಮಾಡುವುದು ಬಿಟ್ಟು ವಿರೋಧ ಪಕ್ಷದವರು ಭಾಗ್ಯಗಳ ಲಾಭವ ಸಿಗದ ಫಲಾನುಭವಿಗಳ ಗುರುತಿಸಿ ಅವರಿಗೆ ಕೊಡಿಸುವ ಕೆಲಸ ಮೊದಲು ಮಾಡಲಿ ಎಂದರು.

ವಿರೋಧ ಪಕ್ಷದ ನಾಯಕ ಛಾಯಾ ಮುಖ್ಯಮಂತ್ರಿ ಇದ್ದಂತೆ. ಹೀಗಾಗಿ ಆರ್.ಅಶೋಕ್ ಅವರು ಘನತೆಯಿಂದ ಮಾತಾಡಬೇಕು. ಸರ್ಕಾರ ಬೀಳಿಸುವ ಯೋಚನೆ, ಹುಚ್ಚು ಕೆಲಸ ಬಿಡಿ ಎಂದು ಸಲಹೆ ನೀಡಿದರು.

 

RELATED ARTICLES

Related Articles

TRENDING ARTICLES