Wednesday, January 22, 2025

Bigg Boss Season 10 : ಡ್ರೋನ್​ ಪ್ರತಾಪ್ ವಿನ್ನರ್ ಆಗ್ತಾರೆ; ಭವಿಷ್ಯ ನುಡಿದ ನೀತು ವನಜಾಕ್ಷಿ

ಬೆಂಗಳೂರು: ಬಿಗ್ ಬಾಸ್ ಸೀಸನ್ 10ರ ವಿನ್ನರ್  ಡ್ರೋನ್​ ಪ್ರತಾಪ್ ಆಗುತ್ತಾರೆ ಎಂದು ಜೀಯೊ ಸಿನಿಮಾಕ್ಕೆ ನೀಡಿರುವ ಎಕ್ಸ್‌ಕ್ಲ್ಯೂಸಿವ್ ಸಂದರ್ಶನದಲ್ಲಿ ನೀತು ವನಜಾಕ್ಷಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. 

ಏಳು ವಾರಗಳ ಸುದೀರ್ಘ ಅವಧಿಯಲ್ಲಿ ಬಿಗ್‌ಬಾಸ್ ಮನೆಯಲ್ಲಿ ಹಲವು ಏಳುಬೀಳುಗಳನ್ನು ಅವರು ಕಂಡಿದ್ದಾರೆ. ಈ ವಾರ ಅವರೇ ಮನೆಯ ಕ್ಯಾಪ್ಟನ್ ಆಗಿರುವುದೂ ವಿಶೇಷ. ಆದರೆ ಆ ಕ್ಯಾಪ್ಟನ್ಸಿ ಅವಧಿಯನ್ನು ಪೂರ್ತಿಗೊಳಿಸುವ ಮುನ್ನವೇ ಅವರು ಹೊರಗೆ ಬರಬೇಕಾಗಿದೆ. ಬಿಗ್‌ಬಾಸ್‌ನ ಈ ಜರ್ನಿಯ ಕುರಿತು ಜಿಯೋ ಸಿನಿಮಾಗೆ ನೀಡಿರುವ ಎಕ್ಸ್‌ಕ್ಲ್ಯೂಸಿವ್ ಸಂದರ್ಶನದಲ್ಲಿ ನೀತು ಹಲವು ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಅವರು ಬಿಗ್‌ಬಾಸ್ ಪಯಣ ಹೇಗಿತ್ತು ಎಂಬುದನ್ನು ಹೇಳಿಕೊಂಡರು.

ಈವಾಗಷ್ಟೇ ಹೊರಗೆ ಬಂದಿದೀನಿ. ಸ್ವಲ್ಪ ಬೇಜಾರು ಇದ್ದೇ ಇದೆ. ಆದರೆ 50 ದಿನ ಮುಗಿಸಿದ್ದೇನೆ ಎಂಬ ಖುಷಿಯಿದೆ. ಎಲ್ಲ ಕಂಟೆಸ್ಟೆಂಟ್‌ಗಳ ಮಧ್ಯ ನಾನೂ ಅಷ್ಟು ದಿನ ಸರ್ವೈವ್ ಆಗಿದ್ದೀನಿ ಎಂಬ ಹೆಮ್ಮೆ ಇದೆ. ತುಂಬ ಅನುಭವಗಳ ಜತೆಗೆ ಮನೆಗೆ ಹೋಗುತ್ತಿದ್ದೇನೆ. ಈ ಅನುಭವಗಳನ್ನು ಮುಂದೆ ಒಳ್ಳೆಯ ರೀತಿಯಲ್ಲಿ ಬಳಸಿಕೊಂಡು ಮುನ್ನುಗ್ಗುತ್ತೇನೆ ಎಲಿಮಿನೇಷನ್‌ ನಿರೀಕ್ಷಿತವೇ ಆಗಿತ್ತುʼʼ ಎಂದರು.

ಹೊರಗಡೆ ಬರ್ತೀನಿ ಅನ್ನೋ ನಿರೀಕ್ಷೆಯಿತ್ತು

ಹೊರಗಡೆ ಬರ್ತೀನಿ ಅನ್ನುವುದನ್ನು ನಿರೀಕ್ಷೆ ಮಾಡಿದ್ದೆ. ಯಾಕಂದರೆ ಕಳೆದ ಎರಡು ವಾರದಿಂದ ನನ್ನ ಪರ್ಪಾರ್ಫೆನ್ಸ್‌ ತುಂಬ ಕಡಿಮೆ ಇತ್ತು. ಆದರೆ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಚೆನ್ನಾಗಿ ಆಡಿದ್ದೆ. ಆದರೆ ದುರದೃಷ್ಟ. ಏನೂ ಮಾಡಕ್ಕಾಗಲ್ಲ ಎಂದರು.

ಕೆಲವೊಂದು ವಿಚಾರದಲ್ಲಿ ನಾನು ಸ್ವಲ್ಪ ಹಿಂದೇಟು ಹಾಕ್ತಿದ್ದೆ. ಯಾಕೆಂದರೆ ಆರಂಭದಲ್ಲಿ ಜಗಳ ಆಡ್ತಿದ್ದೆ. ಸರಿಯಾದ ವಿಷಯಕ್ಕೇ ಜಗಳ ಆಡ್ತಿದ್ದೆ. ಆಮೇಲಾಮೇಲೆ, ನಾನು ಬೇರೆ ರೀತಿ ಪ್ರೊಜಕ್ಟ್ ಆಗ್ತಿದೀನಾ ಎಂದು ಅನಿಸಲು ಶುರುವಾಯ್ತು. ಅದರಿಂದ ಹಿಂಜರಿಗೆ. ಅಲ್ಲಿಂದ ನನ್ನ ವ್ಯಕ್ತಿತ್ವ ತೋರಿಸಲು ಸಾಧ್ಯವಾಗಲಿಲ್ಲ. ಟಾಸ್ಕ್‌ನಲ್ಲಿಯೂ ಎಲ್ಲರೂ ಹೇಳಿದ್ದನ್ನ ಒಪ್ಪಿಕೊಂಡುಬಿಡುತ್ತಿದ್ದೆ. ಅಲ್ಲಿ ಇನ್ನೂ ಸ್ವಲ್ಪ ಚುರುಕಾಗಿದ್ದಿದ್ರೆ ನಾನು ಸರ್ವೈವ್ ಆಗಬಹುದಾಗಿತ್ತು. ಈಗ ನಾನು ಮತ್ತೆ ಹೋದ್ರೆ ಖಂಡಿತ ಇನ್ನಷ್ಟು ಚೆನ್ನಾಗಿ ಪರ್ಫಾರ್ಪೆನ್ಸ್‌ ಮಾಡುತ್ತೇನೆʼʼ ಎಂದರು.

ಕಿಚ್ಚನ ಚಪ್ಪಾಳೆ ಎಂಬ ಟ್ರೋಫಿ!

ʻʻಯಾವಾಗ ನನಗೆ ಕಿಚ್ಚನ ಚಪ್ಪಾಳೆ ಬಂತೋ, ನನಗದು ಟ್ರೋಫಿ ತಗೊಂಡ ಹಾಗೆ. ಅಷ್ಟು ಖುಷಿಯಾಯ್ತು ನಂಗೆ. ಚೆನ್ನಾಗಿ ಆಡ್ತಾ ಇದ್ದೀನಿ ಅನ್ನೋ ಕಾನ್ಫಿಡೆನ್ಸ್ ಬಂತು. ಒಬ್ಬ ಸ್ಪರ್ಧಿಗೆ ಏನೇನು ಸಿಗಬೇಕೋ ಅವೆಲ್ಲವೂ ನನಗೆ ಸಿಕ್ಕಿವೆ.
ಜೆನ್ಯೂನ್-ಫೇಕ್! ಬಿಗ್‌ಬಾಸ್‌ ಮನೆಯೊಳಗೆ ನನ್ನ ಪ್ರಕಾರ ಪ್ರತಾಪ್ ತುಂಬ ಜೆನ್ಯೂನ್. ಯಾಕೆಂದ್ರೆ ಅವನತ್ರ ಮಾತಾಡಬೇಕಾದ್ರೆ ನಾಟಕೀಯತೆ ಇರುತ್ತಿರಲಿಲ್ಲ. ಚೆನ್ನಾಗಿ ಆಡ್ತಾನೂ ಇದ್ದಾನೆ. ಸ್ನೇಹಿತ್ ಫೇಕ್ ಅನಿಸ್ತಾನೆ. ಯಾಕೆಂದರೆ ‘ಟಾಸ್ಕ್ ಎಲ್ಲ ಆಯ್ತು, ಇನ್ಮೇಲಿಂದ ಫ್ರೈಡೆ ಸಾಟರ್‍ಡೇ ನಾವೊಂದ್ ಸ್ವಲ್ಪ ಎಂಟರ್‍ಟೈನಿಂಗ್ ಆಗಿರ್ಬೇಕು’ ಅಂತ. ಹಾಗಾಗಿ ಅವನು ಬಹುಶಃ ಕ್ಯಾಮೆರಾಗೋಸ್ಕರ ಚಟುವಟಿಕೆ ಮಾಡ್ತಿದ್ದಾನೆ ಅನ್ಸತ್ತೆʼʼಎಂದರು.

 

 ಬಿಗ್ ಬಾಸ್​ ವಿನ್ನರ್ ಯಾರು..? 

ಪ್ರತಾಪ್‌, ತುಕಾಲಿ ಸಂತೋಷ್, ಸಂಗೀತಾ, ಕಾರ್ತಿಕ್, ತನಿಷಾ ಈ ಐವರು ಈ ಸಲದ ಬಿಗ್‌ಬಾಸ್‌ ಫೈನಲ್‌ನಲ್ಲಿ ಇರುತ್ತಾರೆ. ಅವರಲ್ಲಿ ಪ್ರತಾಪ್ ವಿನ್ನರ್ ಆಗುತ್ತಾರೆʼʼಎಂದು ಭವಿಷ್ಯ ನುಡಿದರು.

 

RELATED ARTICLES

Related Articles

TRENDING ARTICLES