Monday, December 23, 2024

Kantara A Legend Chapter-1: ಏಳು ಭಾಷೆಯಲ್ಲಿ ಕಾಂತಾರ ಫಸ್ಟ್ ಲುಕ್, ಟೀಸರ್ ರಿಲೀಸ್ 

ಬೆಂಗಳೂರು: ಡಿವೈನ್ ಸ್ಟಾರ್  ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಸಿನಿಮಾದ ಪ್ರೀಕ್ವೆಲ್  Kantara A Legend Chapter-1 (ಕಾಂತಾರ-2)ನ ಫಸ್ಟ್ ಲುಕ್ ಹಾಗೂ ಟೀಸರ್ ಇಂದು ಬಿಡುಗಡೆಯಾಗಿದೆ.

ಏಳು ಭಾಷೆಯಲ್ಲಿ ಸಿನಿಮಾ ತೆರೆಗೆ 

ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಮಲಯಾಳಂ ಹಾಗೂ ಬಂಗಾಳಿ ಭಾಷೆಯಲ್ಲಿ ಬಿಡುಗಡೆಯಾಗಿದ್ದು ಹೊಂಬಾಳೆ ಫಿಲ್ಡ್ ತನ್ನ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಹಂಚಿಕೊಂಡಿದೆ.

ಯುಟ್ಯೂಬ್‌ನಲ್ಲಿ ಟೀಸ‌ರ್ ಬಿಡುಗಡೆಯಾಗಿದ್ದು ಕಾಂತಾರ ಪ್ರೀಕ್ವೆಲ್ ಕತೆ ಕದಂಬರ ಕಾಲಕ್ಕೆ ಕರೆದುಕೊಂಡು ಹೋಗಲಿದೆ ಎಂದು ಬಹಿರಂಗವಾಗಿದೆ. ದೈವಿಕ ಭೂಮಿ ಕಡೆಗೆ ಹೆಜ್ಜೆ ಎಂದು ಕಾಂತಾರ ಪ್ರೀಕ್ವೆಲ್ ಅನ್ನು ಹೊಂಬಾಳೆ ಬಣ್ಣಿಸಿದೆ.

ರಿಷಬ್ ಶೆಟ್ಟಿ ಸಿನಿಪಯಣದ ದಿಕ್ಕನ್ನು ಬದಲಿಸಿದ ಸಿನಿಮಾ ಕಾಂತಾರ

ನಟ ರಿಷಬ್ ಶೆಟ್ಟಿ ಅವರ ಸಿನಿಪಯಣದ ದಿಕ್ಕನ್ನು ಬದಲಿಸಿದ ಸಿನಿಮಾ ಕಾಂತಾರ. ವಿಶ್ವವ್ಯಾಪಿ ಪ್ರೇಕ್ಷಕರ ಮನಗೆಲ್ಲುವುದರೊಂದಿಗೆ, ಬಾಕ್ಸ್ ಆಫೀಸ್‌ನಲ್ಲಿ ಕೋಟಿ ಕೋಟಿ ಹಣವನ್ನೂ ಬಾಚಿತ್ತು. ಇದೀಗ ಈ ಸಿನಿಮಾದ ಪ್ರೀಕ್ವೆಲ್ (ಹಿಂದಿನ ಕಥೆ) ತೆರೆಯ ಮೇಲೆ ಬರಲಿದ್ದು, ಪ್ರೇಕ್ಷಕರಲ್ಲಿ ಹೆಚ್ಚಿನ ನಿರೀಕ್ಷೆ ಹುಟ್ಟಿಸಿದೆ.

ಕಾಂತಾರ-2 ಟೀಸರ್ ಬಗ್ಗೆ ರಿಷಬ್ ಶೆಟ್ಟಿ ಮಾತು 

ಪ್ರೀಕ್ವೆಲ್ ಕುರಿತು ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ನಟ ರಿಷಬ್ ಶೆಟ್ಟಿ, ‘ನಾನು ವೈಯಕ್ತಿಕವಾಗಿ ಪ್ರೀಕ್ವೆಲ್‌ಗೆ ಹೇಗೆ ಸಿದ್ಧವಾಗುತ್ತಿದ್ದೇನೆ ಎನ್ನುವುದನ್ನು ಮೇಕಿಂಗ್ ಮೂಲಕವೇ ತಿಳಿಸುತ್ತೇನೆ. ಮೊದಲ ಭಾಗವು ಎಷ್ಟು ಸಮಯದ ಮಿತಿಯನ್ನು ಬಯಸಿತ್ತೋ, ಅಷ್ಟೇ ಸಮಯದಲ್ಲಿ ಅದರ ಚಿತ್ರೀಕರಣ ಮುಗಿಸಿದ್ದೆವು. ಪ್ರೀಕ್ವೆಲ್ ಕಥೆಯ ಬೇಡಿಕೆ ಏನಿರುತ್ತದೆಯೋ ಅಷ್ಟೇ ಸಮಯವನ್ನು ಅದಕ್ಕೆ ನೀಡುತ್ತೇವೆ’ ಎಂದು ಹೇಳಿದ್ದರು.

RELATED ARTICLES

Related Articles

TRENDING ARTICLES