Friday, November 22, 2024

ಕರ್ನಾಟಕ ಸೇರಿ ದೇಶಾದ್ಯಂತ ಹಲಾಲ್ ನಿಷೇಧ ಆಗಬೇಕು : ಶಾಸಕ ಯತ್ನಾಳ್

ವಿಜಯಪುರ : ಕರ್ನಾಟಕ ಸೇರಿದಂತೆ ರಾಷ್ಟ್ರಾದ್ಯಂತ ಹಲಾಲ್ ನಿಷೇಧ ಆಗಬೇಕು ಎಂದು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಹಲಾಲ್ ಉತ್ಪನ್ನಗಳನ್ನು ಹಿಂಪಡೆಯಲು 15 ದಿನಗಳ ಗಡುವು ನೀಡಿರುವುದು ಸ್ವಾಗತಾರ್ಹ ಎಂದು ತಿಳಿಸಿದ್ದಾರೆ.

ರಾಜಕೀಯ ಇಚ್ಛಾಶಕ್ತಿ, ಉತ್ಕಟ ದೇಶ ಪ್ರೇಮವಿವಿದ್ದರೆ ಯಾವ ನಿರ್ಧಾರವನ್ನು ಕೈಗೊಳ್ಳಬಹುದು ಎಂಬುದಕ್ಕೆ ಉತ್ತರ ಪ್ರದೇಶದ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥರೇ ಉದಾಹರಣೆ. ಹಲಾಲ್ ನಿಂದ ಹರಿದು ಬರುವ ಹಣವನ್ನು ದೇಶ ವಿರೋಧಿ ಚಟುವಟಿಕೆಗಳಿಗೆ ಉಪಯೋಗಿಸಲಾಗುತ್ತಿದೆ. ಉಗ್ರರಿಗೆ ಕಾನೂನು ಸಹಾಯ ಹಾಗೂ ವ್ಯಾಪಾರದಲ್ಲಿ ಏಕಸ್ವಾಮ್ಯತೆ ಸಾಧಿಸುವುದು ನಿಯಮ ಬಾಹಿರ. ಅಲ್ಲದೇ, ಸಂವಿಧಾನದ ಆಶಯಗಳಿಗೆ ವಿರುದ್ಧವಾದ ಕೆಲಸ ಆಗುತ್ತದೆ ಎಂದು ಕಿಡಿಕಾರಿದ್ದಾರೆ.

ಹಲಾಲ್ ಮುದ್ರೆ ತೆಗೆಯಬೇಕು

ಸಿಎಂ ಯೋಗಿ ಆದಿತ್ಯನಾಥರ ಈ ನಿರ್ಧಾರ ಸ್ವಾಗತಾರ್ಹ, ಹಲಾಲ್ ನಿಷೇಧವನ್ನು ಕರ್ನಾಟಕ ಸೇರಿದಂತೆ ರಾಷ್ಟ್ರಾದ್ಯಂತ ಆಗಬೇಕು ಎಂದು ಶಾಸಕ ಯತ್ನಾಳ್ ಅಭಿಪ್ರಾಯಪಟ್ಟಿದ್ದಾರೆ. ಯುಪಿ ಸರ್ಕಾರ ಹೊರಡಿಸಿರುವ ಆದೇಶದನ್ವಯ ಮಾಂಸ ಹಾಗೂ ರಫ್ತು ಮಾಡುವ ಉತ್ಪನ್ನಗಳನ್ನು ಹೊರತುಪಡಿಸಿ ಉಲಿದ ಹಲಾಲ್ ಪ್ರಮಾಣೀಕೃತ ವಸ್ತುಗಳನ್ನು ವಾಪಸ್ ಪಡೆಯಬೇಕು. ಉತ್ಪನ್ನಗಳ ಮೇಲಿನ ಹಲಾಲ್ ಮುದ್ರೆ ತೆಗೆಯಬೇಕಿದೆ.

RELATED ARTICLES

Related Articles

TRENDING ARTICLES