Monday, December 23, 2024

ಕೋಟಿ ಕುಳ, ಗುತ್ತಿಗೆದಾರ ಅಂಬಿಕಾಪತಿ ಹೃದಯಾಘಾತದಿಂದ ಸಾವು

ಬೆಂಗಳೂರು : ಕಳೆದ ತಿಂಗಳು ಐಟಿ ದಾಳಿಗೆ ಒಳಗಾಗಿದ್ದ ರಾಜ್ಯ ಗುತ್ತಿಗೆದಾರರ ಸಂಘದ ಉಪಾಧ್ಯಕ್ಷರಾಗಿದ್ದ ಅಂಬಿಕಾಪತಿ ಅವರು ಹೃದಯಾಘಾತದಿಂದ ಇಂದು ಮೃತಪಟ್ಟಿದ್ದಾರೆ.

ಅಂಬಿಕಾಪತಿ ಅವರಿಗೆ ಸಂಜೆ 6.30ರ ಸುಮಾರಿಗೆ ಹೃದಯಘಾತವಾಗಿದ್ದು, ಬೆಂಗಳೂರಿನ ಹೆಬ್ಬಾಳದ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಅಂಬಿಕಾಪತಿ ಅವರು ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರು ಸೇರಿದಂತೆ ಕುಟುಂಬದವರನ್ನು ಅಗಲಿದ್ದಾರೆ.

ಬರೋಬ್ಬರಿ 44 ಕೋಟಿ ರೂ. ಪತ್ತೆ

ಕಳೆದ ತಿಂಗಳಷ್ಟೇ ಅಂಬಿಕಾಪತಿ ಅವರ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದರು. ಈ ವೇಳೆ ಅಂಬಿಕಾಪತಿ ಅವರ ಮನೆಯಲ್ಲಿ44 ಕೊಟಿ ರೂಪಾಯಿ ನಗದು ಪತ್ತೆಯಾಗಿತ್ತು. ಈ ವಿಚಾರ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿತ್ತು. ಈ ಬಗ್ಗೆ ತನಿಖೆ ನಡೆಯುತ್ತಿತ್ತು. ಈ ಘಟನೆ ಬಳಿಕ ಮಾನಸಿಕ ಒತ್ತಡಕ್ಕೆ ಒಳಗಾಗಿ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ.

RELATED ARTICLES

Related Articles

TRENDING ARTICLES