Friday, January 24, 2025

ಇಂದು ಇಡೀ ದಿನ ಸಿಎಂ ಜನತಾ ದರ್ಶನ!

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಬೆಳಿಗ್ಗೆ 9.30ರಿಂದ ಇಡೀ ದಿನ ಜನತಾ ದರ್ಶನ ನಡೆಸಲಿದ್ದಾರೆ.

ಅಹವಾಲು ಸಲ್ಲಿಸುವವರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಸಿಎಂ ಗೃಹ ಕಚೇರಿ ಕೃಷ್ಣಾ ಆವರಣದಲ್ಲಿ 20 ಕೌಂಟರ್ ವ್ಯವಸ್ಥೆ ಮಾಡಲಾಗಿದೆ. ಹಿರಿಯ ನಾಗರಿಕರು ಹಾಗೂ ಅಂಗವಿಕಲರಿಗೆ ಎರಡು ಪ್ರತ್ಯೇಕ ಕೌಂಟರ್‌ಗಳು ಇರಲಿವೆ.

ಇದನ್ನೂ ಓದಿ: ಇಂದು ‘ಕಾಂತಾರ’ ಪ್ರೀಕ್ವೆಲ್​​​​ನ ಫಸ್ಟ್‌ ಲುಕ್‌ ಬಿಡುಗಡೆ!

ಜನರಿಂದ ಸ್ವೀಕರಿಸಿದ ಅಹವಾಲುಗಳನ್ನು ಇಲಾಖಾವಾರು ವಿಂಗಡಿಸಿ, ತಂತ್ರಾಂಶದಲ್ಲಿ ದಾಖಲಿಸಿ ಅರ್ಜಿದಾರರಿಗೆ ಸ್ವೀಕೃತಿ ನೀಡಲಾಗುತ್ತದೆ. ಬಳಿಕ, ಜನರ ಅಹವಾಲನ್ನು ನೇರವಾಗಿ ಆಲಿಸಲಿರುವ ಸಿದ್ದರಾಮಯ್ಯ, ಪರಿಹಾರವನ್ನು ಸೂಚಿಸುವರು ಎಂದು ಮುಖ್ಯಮಂತ್ರಿ ಸಚಿವಾಲಯದ ಪ್ರಕಟಣೆ ತಿಳಿಸಿದೆ.

RELATED ARTICLES

Related Articles

TRENDING ARTICLES