Monday, November 25, 2024

ಬಿಜೆಪಿಗೆ ಮತ ನೀಡಿದ್ರೆ OBCಗೆ ಸಿಎಂ ಸ್ಥಾನ : ಪ್ರಧಾನಿ ಮೋದಿ ಘೋಷಣೆ

ತೆಲಂಗಾಣ : ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡಿ ಗೆಲ್ಲಿಸಿದರೆ, ತೆಲಂಗಾಣದಲ್ಲಿ ಓಬಿಸಿ ಸಮುದಾಯಕ್ಕೆ ಸೇರಿದವರೊಬ್ಬರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.

ಮುರಾದಾಬಾದ್​ನಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೆ. ಚಂದ್ರಶೇಖರರಾವ್ ನೇತೃತ್ವದ ಬಿಆರ್​ಎಸ್ ಸರ್ಕಾರ ಮತ್ತು ಕಾಂಗ್ರೆಸ್ ಎರಡೂ ಸಹ ರಾಜ್ಯವನ್ನು ಹಾಳು ಮಾಡುವಲ್ಲಿ ಸಮಪಾಲು ಹೊಂದಿವೆ ಎಂದು ಗುಡುಗಿದ್ದಾರೆ.

ಪ್ರಸಕ್ತ ಪರಿಸ್ಥಿತಿಯನ್ನು ಗಮನಿಸಿದರೆ ಇದೇ ಮೊದಲ ಬಾರಿಗೆ ತೆಲಂಗಾಣದಲ್ಲಿ ಕಮಲ ಅರಳುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಹಾಗೇನಾದರೂ ತೆಲಂಗಾಣದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡುವುದಾದರೆ, ಹಿಂದುಳಿದ ವರ್ಗಗಳಿಗೆ ಸೇರಿದವರೊಬ್ಬರು ತೆಲಂಗಾಣದ ಮುಖ್ಯಮಂತ್ರಿಯಾಗುವುದು ನಿಶ್ಚಿತ ಎಂದು ಪ್ರಧಾನಿ ಮೋದಿ ವಾಗ್ದಾನ ನೀಡಿದ್ದಾರೆ.

ಕಮಲಕ್ಕೆ ನಿಮ್ಮ ಮತ ನೀಡಿ

ಕಾಂಗ್ರೆಸ್‌ ಪಕ್ಷಕ್ಕೆ ನೀಡುವ ವೋಟ್‌ಗಳು ಕೆಸಿಆರ್‌ಗೆ ಮತ್ತೆ ಅಧಿಕಾರಕ್ಕೆ ಬರಲು ಬಾಗಿಲು ತೆರೆದಂತೆ. ಕಾಂಗ್ರೆಸ್ ಶಾಸಕರು ಯಾವಾಗ ಬಿಆರ್‌ಎಸ್‌ಗೆ ಬದಲಾಯಿಸುತ್ತಾರೆ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ. ಕೆಸಿಆರ್ ಅವರನ್ನು ಅಧಿಕಾರದಿಂದ ಕಿತ್ತೊಗೆಯಲು ಇರುವ ಏಕೈಕ ಮಾರ್ಗ ಕಮಲ(ಬಿಜೆಪಿ) ಪಕ್ಷಕ್ಕೆ ಮತ ನೀಡುವುದು. ತೆಲಂಗಾಣದಲ್ಲಿ ಬಿಆರ್‌ಎಸ್‌ನ ದೋಣಿ ಮುಳುಗಲಿದೆ. ಡಿಸೆಂಬರ್ 3 ರಂದು ತನ್ನ ಟಿಕೆಟ್ ರದ್ದುಗೊಳ್ಳಲಿದೆ ಅಂತ ಬಿಆರ್‌ಎಸ್‌ಗೂ ಅರಿವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES