Monday, December 23, 2024

ರಶ್ಮಿಕಾ ಮಂದಣ್ಣ, ಕತ್ರಿನಾ ಕೈಫ್‌, ಕಾಜೋಲ್‌ ಆಯ್ತು, ಇದೀಗ ಆಲಿಯಾ ಭಟ್‌ ಡೀಪ್‌ಫೇಕ್‌ ವಿಡಿಯೋ ವೈರಲ್‌

ಬೆಂಗಳೂರು: ಸಿನಿಮಾ ನಟಿಯರ ನಕಲಿ ಅಶ್ಲೀಲ ವಿಡಿಯೋ ಸೃಷ್ಟಿಸುವ ಡೀಪ್‌ಫೇಕ್‌ ಹಾವಳಿ ಮುಂದುವರೆದಿದೆ. ಇದೀಗ ಆಲಿಯಾ ಭಟ್‌ ಅವರಿಗೂ ಕಂಟಕ ಎದುರಾಗಿದೆ. ಈ ಹಿಂದೆ ರಶ್ಮಿಕಾ ಮಂದಣ್ಣ ಮತ್ತು ಕಾಜೋಲ್‌ರ ಡೀಪ್‌ಫೇಕ್‌ ವಿಡಿಯೋ ವೈರಲ್‌ ಆಗಿತ್ತು.

ಡೀಪ್‌ಫೇಕ್ ವಿಡಿಯೋ ವೈರಲ್ ಆದ ಬೆನ್ನಲೇ ಸೈಬರ್ ಕ್ರೈಂ ತಂಡ ಕಠಿಣ ಕ್ರಮ ಕೈಗೊಂಡರೂ ಕೂಡ ಮತ್ತೆ ಕಿಡಿಗೇಡಿಗಳಿಂದ ಕಾಟ ಶುರುವಾಗಿದೆ. ಈ ಸೋಷಿಯಲ್ ಮೀಡಿಯಾದಲ್ಲಿ ಅರೆ ಬರೆ ಬಟ್ಟೆಯಲ್ಲಿ ಸಖತ್ ಹಾಟ್ ಕಾಣಿಸಿಕೊಂಡಿರುವ ಯುವತಿಯ ದೇಹಕ್ಕೆ ಆಲಿಯಾ ಮುಖ ಅಂಟಿಸಿ ವೈರಲ್ ಮಾಡಿದ್ದಾರೆ.

ಇದನ್ನೂ ಓದಿ: ರಶ್ಮಿಕಾ ಕುರಿತು ವೈರಲ್​ ಆದ `ಆ’ ವಿಡಿಯೋ ಫೇಕ್!

ಈ ಹಿಂದೆಯೂ ಕೂಡ ರಶ್ಮಿಕಾ ಡೀಪ್‌ಫೇಕ್ ವಿಡಿಯೋ ವೈರಲ್ ಆದಾಗ ಅಮಿತಾಭ್ ಬಚ್ಚನ್ ಸೇರಿದಂತೆ ಹಲವರು ಕಲಾವಿದರು ರಶ್ಮಿಕಾ ಪರ ಧ್ವನಿಯೆತ್ತಿದ್ದರು. ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆ ಆಗಲೇಬೇಕೆಂದು ಅನೇಕರು ಮನವಿ ಮಾಡಿದ್ದರು.

ಇದನ್ನೂ ಓದಿ: ಆರ್‌.ಅಶೋಕ್‌ಗೆ ಜೋಶ್‌ ಹೆಚ್ಚಾಗಿದೆ, ಜೋರಾಗಿ ಬಟ್ಟೆ ಒಗೆಯಲಿ: ಡಿ.ಕೆ. ಶಿವಕುಮಾರ್ ವ್ಯಂಗ್ಯ

ಎಐ ಕಾಲದ ವಂಚನೆಯಿಂದ ಪಾರಾಗಲು ತುಸು ಹೆಚ್ಚಿನ ಜಾಗೃತಿ ಮತ್ತು ಜಾಗ್ರತೆಯ ಅಗತ್ಯವಿರುತ್ತದೆ.

 

 

RELATED ARTICLES

Related Articles

TRENDING ARTICLES