Monday, December 23, 2024

ನ.29ಕ್ಕೆ ಪುಜಾ ಗಾಂಧಿ ಮದುವೆ : ಕರ್ನಾಟಕದ ಸೊಸೆಯಾಗಲಿದ್ದಾರೆ ಮಳೆ ಹುಡುಗಿ

ಬೆಂಗಳೂರು : ಮುಂಗಾರು ಮಳೆ ಸಿನಿಮಾ ಮೂಲಕ ಕನ್ನಡಿಗರ ಮನ ಗೆದ್ದಿರುವ ನಟಿ ಪೂಜಾ ಗಾಂಧಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವುದು ಖಚಿತವಾಗಿದೆ.

ಕನ್ನಡದ ಹುಡುಗನನ್ನೇ ಪೂಜಾ ಗಾಂಧಿ ಮದುವೆಯಾಗಲಿದ್ದು, ಇದೇ ನವೆಂಬರ್ 29ರಂದು ಬೆಂಗಳೂರಿನ ಯಲಹಂಕದಲ್ಲಿ ಮಂತ್ರ ಮಾಂಗಲ್ಯ ಪದ್ಧತಿ ಮೂಲಕ ವಿಜಯ್ ಎಂಬುವವರ ಜೊತೆಗೆ ಸಪ್ತಪದಿ ತುಳಿಯಲಿದ್ದಾರೆ.

ವರ ವಿಜಯ್ ಲಾಜಿಸ್ಟಿಕ್ ಕಂಪನಿಯ ಮಾಲೀಕರಾಗಿದ್ದು, ಹಲವು ವರ್ಷಗಳಿಂದ ಪೂಜಾ ಗಾಂಧಿ ಜೊತೆ ಸ್ನೇಹವಿತ್ತು. ವಿಜಯ್ ಅವರೇ ಪೂಜಾ ಗಾಂಧಿಯವರಿಗೆ ಕನ್ನಡ ಕಲಿಸಿದ್ದು ಎಂದು ತಿಳಿದುಬಂದಿದೆ.

ಬೆಂಗಾಲಿ ಬ್ಯೂಟಿ ಕನ್ನಡದ ಸೊಸೆ

ನಟಿ ಪೂಜಾ ಗಾಂಧಿ ಮೂಲತಃ ಬೆಂಗಾಲಿಯವರು. ಜನಿಸಿದ್ದು ಉತ್ತರಪ್ರದೇಶದ ಮೀರತ್‌, ಬೆಳೆದಿದ್ದು ಶಿಕ್ಷಣ ದೆಹಲಿಯಲ್ಲಿ. ಮುಂಗಾರು ಮಳೆ ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟ ಅವರು ಇಲ್ಲಿ ಸಕ್ಸಸ್‌ ಪಡೆದುಕೊಂಡು ನೆಲೆ ನಿಂತರು. ಬಳಿಕ ಹಲವು ವರ್ಷಗಳ ಕಾಲ ಬೇಡಿಕೆಯಲ್ಲಿದ್ದು ಹತ್ತಾರು ಸಿನಿಮಾಗಳಲ್ಲಿ ನಟಿಸಿದವರು. ಈಗ ಕರ್ನಾಟಕದ ಸೊಸೆ ಆಗಲಿದ್ದಾರೆ.

RELATED ARTICLES

Related Articles

TRENDING ARTICLES