Thursday, September 19, 2024

ಇವರೇ ನೋಡಿ ಬಿಗ್‌ಬಾಸ್ ಮನೆಗೆ ವೈಲ್ಡ್‌ ಕಾರ್ಡ್ ಎಂಟ್ರಿ ಕೊಟ್ಟ ಕಂಟೆಸ್ಟೆಂಟ್ಸ್

ಬೆಂಗಳೂರು: ಬಿಗ್ ಬಾಸ್​ ಸೀಸನ್ 10 ಶುರುವಾಗಿ 50 ದಿನಗಳು ಶುವಾಗಿತ್ತು. ಅಂದ್ರೆ ಇನ್ನುಳಿದ 50ದಿನಗಳ ಆಟವಾಗಿ ಬೇರೆ ರೀತಿಯದ್ದು,ಇನ್ನೂ ಮುಂದೆ ದೊಡ್ಮನೆಯ ಸದಸ್ಸರಿಗೆ ಒಂದಲ್ಲ ಡವಲ್ ಶಾಕ್​ ನೀಡಿದ್ದಾರೆ.

ಇದೀಗ ಬಿಗ್ ಬಾಸ್ ಮನೆಯಲ್ಲಿ ಡಬಲ್ ವೈಲ್ಡ್ ಕಾರ್ಡ್​ ಎಂಟ್ರಿಯಾಗಿದೆ. ಒಂದೇ ರಾತ್ರಿಯಲ್ಲಿ ಒಬ್ಬರಲ್ಲ, ಇಬ್ಬರ ಗ್ರ್ಯಾಂಡ್ ಎಂಟ್ರಿಯಾಗಿದೆ. ವೈಲ್ಡ್‌ ಕಾರ್ಡ್‌ ಎಂಟ್ರಿಯ ಪ್ರೊಮೋ ರಿಲೀಸ್ ಮಾಡಲಾಗಿದ್ದು ಯಾರವರು ಅನ್ನೋದು ಸಸ್ಪೆನ್ಸ್ ಆಗಿತ್ತು. ಆದ್ರೀಗ ಆ ಸರ್‌ಪ್ರೈಸ್‌ ಸ್ಪರ್ಧಿಗಳು ಯಾರು ಅನ್ನೋ ಸೀಕ್ರೆಟ್ ಬಯಲಾಗಿದೆ.

ಇದನ್ನೂ ಓದಿ: ಈ ವಾರ ಅತಿ ಹೆಚ್ಚು ವೋಟ್‌ ಯಾರಿಗೆ..? ಇವರೇ ನೋಡಿ ಬಿಗ್‌ ಬಾಸ್‌ 10 ರ…

ವೈಲ್ಡ್‌ ಕಾರ್ಡ್ ಎಂಟ್ರಿ ಕೊಟ್ಟ ಮೊದಲನೆಯವರು ಪ್ರೊಫೇಷನಲ್ ಮಾಡಲ್ ಪವಿ ಪೂವಪ್ಪ ಅವರು. ಎರಡನೇ ಎಂಟ್ರಿಯಾದವರು ನಟ, ಮಾಡಲ್ ಹಾಗೂ ಕ್ರಿಕೆಟರ್ ಆಗಿರುವ ಆಸ್ತಿಕ್ ಅವಿನಾಶ್ ಶೆಟ್ಟಿ. ಈ ಇಬ್ಬರು ಬಿಗ್ ಬಾಸ್‌ ಮನೆಗೆ ವೈಲ್ಡ್ ಆಗಿ ಗ್ರ್ಯಾಂಡ್ ಎಂಟ್ರಿ ತಗೊಂಡಿದ್ದಾರೆ.

ಬಿಗ್‌ಬಾಸ್‌ ಮನೆಗೆ ಇಬ್ಬರ ವೈಲ್ಡ್ ಕಾರ್ಡ್​ ಎಂಟ್ರಿ ಸ್ಪರ್ಧಿಗಳನ್ನೆಲ್ಲಾ ಸ್ತಬ್ಧರಾಗುವಂತೆ ಮಾಡಿದೆ. ಇವರ ಎಂಟ್ರಿಯಂತೂ ಮಸ್ತ್ ಆಗಿ ಆಗಿದೆ. ಪವಿ ಪೂವಪ್ಪ ಕಾರ್​ನಲ್ಲಿ ಮನೆಗೆ ಎಂಟ್ರಿ ಕೊಟ್ರೆ, ಕ್ಯಾಪ್ಟನ್ ರೂಮ್​ನಿಂದ ಆಸ್ತಿಕ್ ಅವಿನಾಶ್ ಶೆಟ್ಟಿ ರಗಡ್‌ ಎಂಟ್ರಿ ಕೊಟ್ಟಿದ್ದಾರೆ.

ಕಲರ್ಸ್ ಕನ್ನಡ ವಾಹಿನಿ ಈಗಾಗ್ಲೇ ವೈಲ್ಡ್ ಕಾರ್ಡ್​ ಎಂಟ್ರಿ ಪ್ರೋಮೋ ರಿಲೀಸ್ ಮಾಡಿದ್ದು ಬಿಗ್‌ಬಾಸ್‌ ವೀಕ್ಷಕರು ಕೂಡ ತುಂಬಾ ಕುತೂಹಲಕಾರಿಯಾಗಿ ಕಾಯುತ್ತಿದ್ದಾರೆ. ಬಿಗ್‌ಬಾಸ್‌ ಮನೆಯ ಸದಸ್ಯರಿಗೆ ಈ ವೈಲ್ಡ್ ಕಾರ್ಡ್ ಸ್ಪರ್ಧಿಗಳು​ ಯಾವ ರೀತಿ ಪರಿಣಾಮ ಬೀಳುತ್ತೆ ಅನ್ನೋದನ್ನ ಕಾದು ನೋಡ್ಬೇಕಿದೆ.

RELATED ARTICLES

Related Articles

TRENDING ARTICLES