Saturday, December 28, 2024

ಫ್ಯಾನ್ಸ್​ಗೆ ನಿರಾಸೆ : ಸ್ಟಾರ್ ಆಟಗಾರರನ್ನು ‘ಕೈ’ಬಿಟ್ಟ ಆರ್​ಸಿಬಿ

ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (RCB) ಸ್ಟಾರ್​ ಆಟಗಾರರನ್ನು ಕೈಬಿಟ್ಟಿದೆ. ಹೈದರಾಬಾದ್​ ತಂಡದಲ್ಲಿದ್ದ ಮಯಾಂಕ್ ಡಾಗರ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.

ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಜಲ್​ವುಡ್, ಫಿನ್ ಅಲೆನ್, ಮೈಕಲ್ ಬ್ರೇಸ್​ವೆಲ್. ಡೇವಿಡ್ ವಿಲ್ಲಿ, ವೇಯ್ನ್ ಪರ್ನೆಲ್, ಸೋನು ಯಾದವ್, ಅವಿನಾಶ್ ಸಿಂಗ್, ಸಿದ್ಧಾರ್ಥ್ ಕೌಲ್, ಕೇದಾರ್ ಜಾದವ್ ಅವರನ್ನು ಕೈಬಿಟ್ಟಿದೆ.

ಐಪಿಎಲ್ 2024ರ​ ಟ್ರೇಡಿಂಗ್​ ವಿಂಡೋ (Trading Window IPL 2024) ಇಂದಿಗೆ ಕೊನೆಯಾಗಲಿದೆ. 10 ಫ್ರಾಂಚೈಸಿಗಳು ಆಟಗಾರರನ್ನು ಉಳಿಸಿಕೊಳ್ಳುವ ಮತ್ತು ಬಿಡುಗಡೆ ಮಾಡುವ ಪ್ರಕ್ರಿಯೆ ಇಂದು ಸಂಜೆಯೊಳಗೆ ಕೊನೆಯಾಗಲಿವೆ. ಆರ್​ಸಿಬಿ ಹಾಗೂ ಸನ್​ರೈಸರ್ಸ್ ಹೈದರಾಬಾದ್​ ತಂಡಗಳು ತಲಾ ಒಬ್ಬರನ್ನು ಅದಲು ಬದಲು ಮಾಡಿಕೊಂಡಿವೆ.

ಆರ್​ಸಿಬಿ ಪರ್ಸ್​ನಲ್ಲಿ 40.75 ಕೋಟಿ

ಹೈದರಾಬಾದ್ ಮಯಾಂಕ್ ಡಾಗರ್ ಮತ್ತು ಆರ್​ಸಿಬಿ ಶಹಬಾಜ್ ಅಹ್ಮದ್ ಅವರನ್ನು ಟ್ರೇಡ್​ ಮಾಡಿಕೊಂಡಿವೆ. ಇನ್ನೂ ವಿರಾಟ್ ಕೊಹ್ಲಿ ಸೇರಿದಂತೆ ಕೆಲವು ಸ್ಟಾರ್ ಆಟಗಾರರನ್ನು ಆರ್​ಸಿಬಿ ತಂಡದಲ್ಲಿ ಉಳಿಸಿಕೊಂಡಿದೆ. ಆರ್​ಸಿಬಿ ಪರ್ಸ್​ನಲ್ಲಿ 40.75 ಕೋಟಿ ಹಣ ಉಳಿದಿದೆ.

RELATED ARTICLES

Related Articles

TRENDING ARTICLES