Monday, December 23, 2024

ಇಲಾಖೆಗಳ ವಿಲೀನಕ್ಕೂ ಗ್ಯಾರಂಟಿಗೂ ಸಂಬಂಧವಿಲ್ಲ : ಸತೀಶ್ ಜಾರಕಿಹೊಳಿ

ಬೆಳಗಾವಿ : ರೇಷ್ಮೆ ಮತ್ತು ತೋಟಗಾರಿಕೆ ಇಲಾಖೆ ವಿಲೀನಗೊಳಿಸುತ್ತಿರುವ ವಿಚಾರ ಸಂಬಂಧ ಸಚಿವ ಸತೀಶ್ ಜಾರಕಿಹೊಳಿ‌ ಪ್ರತಿಕ್ರಿಯಿಸಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹತ್ತು ವರ್ಷಗಳ ಹಿಂದೆ ಒಂದು ರಿಪೋರ್ಟ್ ಕೊಟ್ಟಿದ್ದಾರೆ. ಆ ರಿಫೋರ್ಟ್ ಆಧಾರದ ಮೇಲೆ ವಿಲೀನ ಮಾಡುತ್ತಾರೆ. ಇಲಾಖೆಗಳ ವಿಲೀನಕ್ಕೂ ಗ್ಯಾರಂಟಿ ಯೋಜನೆಗಳಿಗೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ಇನ್ನು ಕಾಂತರಾಜ್ ವರದಿ (ಜಾತಿ ಜನಗಣತಿ ವರದಿ) ಅಂಗೀಕಾರ ಮಾಡಿದ್ರೆ ಕಾಂಗ್ರೆಸ್​​ಗೆ ಎಫೆಕ್ಟ್ ಆಗುತ್ತಾ? ಎಂಬ ಸುದ್ದಿಗಾರರ ಪ್ರಶ್ನೆಗೆ, ಇನ್ನೂ ಕಾಂತರಾಜ್ ವರದಿ ನಮಗೆ ಕೊಡಬೇಕು. ಆ ವರದಿ ಚರ್ಚೆ ಆಗಬೇಕು, ಆಮೇಲೆ ಒಪ್ಪಿಕೊಳ್ಳುವ ಪ್ರಶ್ನೆ ಬರುತ್ತದೆ. ಕಾಂತರಾಜ್ ವರದಿ ಪ್ರಕ್ರಿಯೆಗೆ ಲಾಂಗ್ ಟೈಮ್ ಇದೆ. ಇನ್ನೂ ವರದಿ ಕೊಡಬೇಕು ಕೊಟ್ಟಿಲ್ಲ. ಎರಡು ತಿಂಗಳು ಸಮಯವನ್ನು ವಿಸ್ತರಣೆ ಮಾಡಲಾಗಿದೆ. ವರದಿ ಕೊಟ್ಟ ಬಳಿಕ ಸರ್ಕಾರವಿದೆ, ಸಿಎಂ, ಡಿಸಿಎಂ ಇದ್ದಾರೆ. ವರದಿ ಕೊಟ್ಟ ಬಳಿಕ ಅವರು ಚರ್ಚೆ ಮಾಡುತ್ತಾರೆ ಎಂದು ತಿಳಿಸಿದ್ದಾರೆ.

ಪ್ರೊಟೆಸ್ಟ್ ಮಾಡೋರಿಗೆ ಬೇಡ ಅನ್ನಲ್ಲ

ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ ಸಿದ್ಧತೆ ಆಗಿದೆ. ಜಿಲ್ಲಾಧಿಕಾರಿ, ಕಮೀಷನರ್ ಎಲ್ಲರೂ ಅಗತ್ಯ ತಯಾರಿ ಮಾಡಿದ್ದಾರೆ. ಪ್ರತಿಭಟನೆ ಮಾಡುವವರಿಗೆ ಬೇಡಾ ಎನ್ನುವುದಕ್ಕೆ ಆಗುದಿಲ್ಲ. ಅವರು ಬಂದು ಸರ್ಕಾರಕ್ಕೆ ತಮ್ಮ ಸಮಸ್ಯೆಗಳನ್ನ ಹೇಳಲಿ. ಪ್ರತಿಭಟನಾಕಾರರ ಸಮಸ್ಯೆ ಆಲಿಸಿದ್ರೆ ಕೊಂಚ ಸಮಾಧಾನ ಆಗ್ತಾರೆ ಎಂದು ಹೇಳಿದ್ದಾರೆ.

RELATED ARTICLES

Related Articles

TRENDING ARTICLES