Friday, May 17, 2024

ಆಸಿಸ್ ಬಗ್ಗುಬಡಿದ ಯಂಗ್ ಇಂಡಿಯಾ : ಭಾರತಕ್ಕೆ ಡಬಲ್ ಧಮಾಕ

ಬೆಂಗಳೂರು : ವಿಶ್ವಕಪ್ ಟ್ರೋಫಿ ಗೆದ್ದು ಬೀಗುತ್ತಿದ್ದ ಆಸಿಸ್​ ತಂಡವನ್ನು ಯಂಗ್ ಇಂಡಿಯಾ ಬಗ್ಗುಬಡಿದಿದೆ.

ಆತಿರುವನಂತಪುರಂ ಸ್ಟೇಡಿಯಂನಲ್ಲಿ ನಡೆದ ಸ್ಟ್ರೇಲಿಯಾ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲಿ ಭಾರತ ತಂಡ 44 ರನ್​ಗಳ ಭಾರಿ ಅಂತರದಿಂದ ಗೆಲವು ದಾಖಲಿಸಿತು. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ ಭಾರತ 2-0 ಮುನ್ನಡೆ ಸಾಧಿಸಿತು.

236 ರನ್​ಗಳ ಬೃಹತ್ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 20 ಓವರ್​ಗಳಲ್ಲಿ 9 ವಿಕೆಟ್​ಗಳನ್ನು ಕಳೆದುಕೊಂಡು 191 ರನ್​ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ 44 ರನ್​ ಗಳಿಂದ ಸೋಲು ಕಂಡಿತು. ಆಸಿಸ್​ ಪರ ಸ್ಟೋನಿಸ್ 45, ಟೀಮ್ ಡೇವಿಡ್​ 37, ವೇಡ್ 98 ರನ್​ ಗಳಿಸಿದರು. ಭಾರತದ ಪರ ಕನ್ನಡಿಗೆ ಪ್ರಸಿದ್ಧ್ ಕೃಷ್ಣ ಹಾಗೂ ರವಿ ಬಿಷ್ಣೋಯಿ ತಲಾ 3 ವಿಕೆಟ್ ಕಬಳಿಸಿದರು. ಮುಖೇಶ್, ಅರ್ಷದೀಪ್ ಹಾಗೂ ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಪಡೆದರು.

ಜೈಸ್ವಾಲ್, ಋತು, ಇಶಾನ್ ಅರ್ಧಶತಕ

ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 235 ರನ್​ ಗಳಿಸಿತು. ಯಶಸ್ವಿ ಜೈಸ್ವಾಲ್ 53, ಋತುರಾಜ್ ಗಾಯಕ್ವಾಡ್ 58, ಇಶಾನ್ ಕಿಶನ್ 52, ಸೂರ್ಯಕುಮಾರ್ ಯಾದವ್ 19, ರಿಂಕು ಸಿಂಗ್ ಅಜೇಯ 31 ರನ್​ ಗಳಿಸಿ ಮಿಂಚಿದರು.

RELATED ARTICLES

Related Articles

TRENDING ARTICLES