ಬೆಂಗಳೂರು : ವಿಶ್ವಕಪ್ ಟ್ರೋಫಿ ಗೆದ್ದು ಬೀಗುತ್ತಿದ್ದ ಆಸಿಸ್ ತಂಡವನ್ನು ಯಂಗ್ ಇಂಡಿಯಾ ಬಗ್ಗುಬಡಿದಿದೆ.
ಆತಿರುವನಂತಪುರಂ ಸ್ಟೇಡಿಯಂನಲ್ಲಿ ನಡೆದ ಸ್ಟ್ರೇಲಿಯಾ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲಿ ಭಾರತ ತಂಡ 44 ರನ್ಗಳ ಭಾರಿ ಅಂತರದಿಂದ ಗೆಲವು ದಾಖಲಿಸಿತು. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ ಭಾರತ 2-0 ಮುನ್ನಡೆ ಸಾಧಿಸಿತು.
236 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 20 ಓವರ್ಗಳಲ್ಲಿ 9 ವಿಕೆಟ್ಗಳನ್ನು ಕಳೆದುಕೊಂಡು 191 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ 44 ರನ್ ಗಳಿಂದ ಸೋಲು ಕಂಡಿತು. ಆಸಿಸ್ ಪರ ಸ್ಟೋನಿಸ್ 45, ಟೀಮ್ ಡೇವಿಡ್ 37, ವೇಡ್ 98 ರನ್ ಗಳಿಸಿದರು. ಭಾರತದ ಪರ ಕನ್ನಡಿಗೆ ಪ್ರಸಿದ್ಧ್ ಕೃಷ್ಣ ಹಾಗೂ ರವಿ ಬಿಷ್ಣೋಯಿ ತಲಾ 3 ವಿಕೆಟ್ ಕಬಳಿಸಿದರು. ಮುಖೇಶ್, ಅರ್ಷದೀಪ್ ಹಾಗೂ ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಪಡೆದರು.
ಜೈಸ್ವಾಲ್, ಋತು, ಇಶಾನ್ ಅರ್ಧಶತಕ
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 235 ರನ್ ಗಳಿಸಿತು. ಯಶಸ್ವಿ ಜೈಸ್ವಾಲ್ 53, ಋತುರಾಜ್ ಗಾಯಕ್ವಾಡ್ 58, ಇಶಾನ್ ಕಿಶನ್ 52, ಸೂರ್ಯಕುಮಾರ್ ಯಾದವ್ 19, ರಿಂಕು ಸಿಂಗ್ ಅಜೇಯ 31 ರನ್ ಗಳಿಸಿ ಮಿಂಚಿದರು.
A win by 44 runs in Trivandrum! 🙌#TeamIndia take a 2⃣-0⃣ lead in the series 👏👏
Scorecard ▶️ https://t.co/nwYe5nOBfk#INDvAUS | @IDFCFIRSTBank pic.twitter.com/sAcQIWggc4
— BCCI (@BCCI) November 26, 2023