Sunday, December 22, 2024

4,4,4,6,6 ಯಶಸ್ವಿ ಜೈಸ್ವಾಲ್ ವಿಧ್ವಂಸಕ ಬ್ಯಾಟಿಂಗ್

ಬೆಂಗಳೂರು : ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ ಆಸಿಸ್​ ಬೌಲರ್​ಗಳನ್ನು ಚಂಡಾಡಿದರು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಆರಂಭಿಕರಾದ ಯಶಸ್ವಿ ಜೈಸ್ವಾಲ್ ಹಾಗೂ ಋತುರಾಜ್ ಗಾಯಕ್ವಾಡ್ ಬೊಂಬಾಟ್ ಆರಂಭ ನೀಡಿದರು. ಜೈಸ್ವಾಲ್ ವಿಧ್ವಂಸಕ ಬ್ಯಾಟಿಂಗ್​ಗೆ ಆಸಿಸ್​ ವೇಗಿಗಳು ಬೆಕ್ಕಸ ಬೆರಗಾದರು.

ಆಸಿಸ್ ಬೌಲರ್ ಸೀನ್ ಅಬಾಟ್ ಎಸೆದ ನಾಲ್ಕನೇ ಓವರ್​ನಲ್ಲಿ ಯಶಸ್ವಿ ಜೈಸ್ವಾಲ್ ಸ್ಪೋಟಕ ಬ್ಯಾಟ್ ಬೀಸಿದರು. ಆ ಓವರ್​ನಲ್ಲಿ ಕ್ರಮವಾಗಿ 4,4,4,6,6,0 ರನ್​ ಸಿಡಿಸಿದರು. ಕೇವಲ 5 ಓವರ್​ಗಳಿಗೆ ಈ ಜೋಡಿ 62 ರನ್​ ಚಚ್ಚಿದರು.

ಅರ್ಧಶತಕ ಗಳಿಸಿ ಔಟ್

ಕೇವಲ 25 ಎಸೆತಗಳನ್ನು ಎದುರಿಸಿದ ಜೈಸ್ವಾಲ್ 9 ಬೌಂಡರಿ ಹಾಗೂ 2 ಸಿಕ್ಸರ್​ಗಳ ನೆರವಿನೊಂದಿಗೆ ಆಕರ್ಷಕ ಅರ್ಧಶತಕ (53) ಸಿಡಿಸಿ ಮುಂಚಿದರು. ಎಲ್ಲಿಸ್ ಬೌಲಿಂಗ್​ನಲ್ಲಿ ದೊಡ್ಡ ಹೊಡೆತಕ್ಕೆ ಮುಂದಾದ ಜೈಸ್ವಾಲ್ ಆಡಂ ಝಂಪಾ ಕೈಗೆ ಕ್ಯಾಚ್ ಕೊಟ್ಟು ಔಟಾದರು.  ಪ್ರಸ್ತುತ ಭಾರತ 12 ಓವರ್​ಗಳಲ್ಲಿ ಒಂದು ವಿಕೆಟ್ ನಷ್ಟಕ್ಕೆ 116 ರನ್​ ಕಲೆಹಾಕಿದೆ. ಸದ್ಯ ಋತುರಾಜ್ ಗಾಯಕ್ವಾಡ್ ಅಜೇಯ 29 ಹಾಗೂ ಇಶಾನ್ ಕಿಶನ್ ಅಜೇಯ 21 ರನ್​ಗಳಿಸಿ ಕ್ರೀಸ್​ನಲ್ಲಿದ್ದಾರೆ.

RELATED ARTICLES

Related Articles

TRENDING ARTICLES