Sunday, January 19, 2025

ಅನೈತಿಕ ಸಂಬಂಧ : ಪತ್ನಿಯನ್ನು ಕೊಂದು ಪೊಲೀಸರಿಗೆ ಶರಣಾದ ಪತಿ

ಬೆಂಗಳೂರು : ಅನೈತಿಕ ಸಂಬಂಧ ಹಿನ್ನಲೆ ಪತಿಯೇ ತನ್ನ ಪತ್ನಿಯನ್ನು ಕೊಲೆಗೈದು ಪೊಲೀಸ್​ ಠಾಣೆಗೆ ತೆರಳಿ ಶರಣಾಗಿರುವ ಘಟನೆ ಆನೇಕಲ್​ ತಾಲೂಕಿನ ತಮ್ಮನಾಯಕನಹಳ್ಳಿಯಲ್ಲಿ ನಡೆದಿದೆ.

ಲಕ್ಷ್ಮಮ್ಮ (40) ಕೊಲೆಯಾದ ದುರ್ದೈವಿ. ಮಹದೇವಯ್ಯ (45) ಎಂಬಾತನೇ ಪತ್ನಿಯನ್ನು ಮಸಣಕ್ಕೆ ಕಳುಹಿಸಿದ ಪಾಪಿ ಪತಿ. ಈ ಸಂಬಂಧ ಮೃತ ಲಕ್ಷ್ಮಮ್ಮಳ ಸಹೋದರ ರಘುಪತಿ ಆನೇಕಲ್‌ ‌ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಆರೋಪಿ ಮಹದೇವಯ್ಯ ಆನೇಕಲ್​ನ ಸೈಡ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಈತನ ಪತ್ನಿ ಲಕ್ಷ್ಮಮ್ಮ ಪರ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧ ಬೆಳೆಸಿದ್ದಳು ಎನ್ನಲಾಗಿದೆ. ಈ ವಿಷಯ ತಿಳಿದ ಮಹದೇವಯ್ಯ ಕೋಪದ ಕೈ ಬುದ್ದಿ ಕೊಟ್ಟಿದ್ದಾನೆ. ಪತ್ನಿಯ ತಲೆಗೆ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದಾನೆ. ಬಳಿಕ ಸ್ವತಃ ತಾನೇ ಠಾಣೆಗೆ ತೆರಳಿ ಪೊಲೀಸರ ಮುಂದೆ ಪತ್ನಿಯನ್ನು ಕೊಲೆಗೈದಿರುವುದಾಗಿ ಶರಣಾಗಿದ್ದಾನೆ.

ಈ ಸಂಬಂಧ ಆನೇಕಲ್‌ ‌ಪೊಲೀಸ್‌‌ ಠಾಣೆಯಲ್ಲಿ ಮಹದೇವಯ್ಯ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

RELATED ARTICLES

Related Articles

TRENDING ARTICLES