Sunday, December 22, 2024

ಜೈಸ್ವಾಲ್, ಇಶಾನ್, ಋತು-ರಿಂಕು ಅಬ್ಬರ : ಆಸಿಸ್ ವಿರುದ್ಧ ಭಾರತ ದಾಖಲೆಯ ಟಾರ್ಗೆಟ್

ಬೆಂಗಳೂರು : ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟಿ-20 ಪಂದ್ಯದಲ್ಲಿ ಭಾರತ ತಂಡ ದಾಖಲೆಯ ಮೊತ್ತ ಕಲೆಹಾಕಿತು.

ತಿರುವನಂತಪುರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಆಸ್ಟ್ರೇಲಿಯಾಗೆ 236 ರನ್​ಗಳ ಬೃಹತ್ ಟಾರ್ಗೆಟ್ ನೀಡಿತು. ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್ ನಷ್ಟಕ್ಕೆ 235 ರನ್​ ಗಳಿಸಿತು.

ಭಾರತದ ಆರಂಭಿಕರಾದ ಯಶಸ್ವಿ ಜೈಸ್ವಾಲ್ ಹಾಗೂ ಋತುರಾಜ್ ಗಾಯಕ್ವಡ್ ಬೊಂಬಾಟ್ ಆರಂಭ ನೀಡಿದರು. ಬಳಿಕ, ಇಶಾನ್ ಕಿಶನ್, ನಾಯಕ ಸೂರ್ಯಕುಮಾರ್ ಯಾದವ್ ಹಾಗೂ ಕೊನೆಯಲ್ಲಿ ರಿಂಕು ಸಿಂಗ್ ಅಬ್ಬರಿಸಿ ಬೊಬ್ಬಿರಿದರು.

ಆಸಿಸ್​ ಬೌಲರ್​ಗಳನ್ನು ಮನಬಂದಂತೆ ದಂಡಿಸಿದ ಯಶಸ್ವಿ ಜೈಸ್ವಾಲ್ ಕೇವಲ 25 ಎಸೆತಗಲ್ಲಿ 9 ಬೌಂಡರಿ ಹಾಗೂ 2 ಸಿಕ್ಸರ್​ಗಳ ನೆರವಿನೊಂದಿಗೆ ಆಕರ್ಷಕ ಅರ್ಧಶತಕ (53) ಸಿಡಿಸಿದರು. ಋತುರಾಜ್ ಗಾಯಕ್ವಡ್ 43 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 3 ಬೌಂಡರಿಗಳೊಂದಿಗೆ ಅರ್ಧಶತಕ (58) ಪೂರೈಸಿ ಔಟಾದರು. ಇಶಾನ್ ಕಿಶನ್ 32 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 3 ಬೌಂಡರಿ ನೆರವಿನೊಂದಿಗೆ 52 ರನ್​ ಸಿಡಿಸಿದರು.

ಆರ್ಭಟಿಸಿದ ರಿಂಕು ಸಿಂಗ್

ಇನ್ನೂ ನಾಯಕ ಸೂರ್ಯಕುಮಾರ್ ಯಾದವ್ 10 ಎಸೆತಗಳಲ್ಲಿ 2 ಬೊಂಬಾಟ್ ಸಿಕ್ಸರ್​ಗಳೊಂದಿಗೆ 19 ರನ್ ಸಿಡಿಸಿ ಔಟಾದರು. ಬಳಿಕ ಕ್ರೀಸ್​ಗಿಳಿದ ಸೂಪರ್ ಸ್ಟಾರ್ ರಿಂಕು ಸಿಂಗ್ ಆಸಿಸ್​ ಬೌಲರ್​ಗಳನ್ನು ಚಚ್ಚಿದರು. ಕೇವಲ 9 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 4 ಬೌಂಡರಿಗಳೊಂದಿಗೆ ಅಜೇಯ 31 ರನ್​ ಸಿಡಿಸಿ ಮಿಂಚಿದರು. ಆಸಿಸ್​ ಪರ ಎಲ್ಲಿಸ್ 3ಹಾಗೂ ಸ್ಟೋನಿಸ್ ಒಂದು ವಿಕೆಟ್ ಪಡೆದರು.

ಟಿ-20ಯಲ್ಲಿ ಭಾರತದ ಗರಿಷ್ಠ ಸ್ಕೋರ್

  • 260/5 vs (SL), ಇಂದೋರ್, 2017
  • 240/3 vs (WI), ಮುಂಬೈ, 2019
  • 237/3 vs (SA), ಗುವಾಹಟಿ, 2022
  • 235/4 vs (AUS), ತಿರುವನಂತಪುರಂ, 2023
  • 234/4 vs (NZ), ಅಹಮದಾಬಾದ್, 2023

RELATED ARTICLES

Related Articles

TRENDING ARTICLES