Thursday, January 23, 2025

ಇಳಿಕೆ ಕಾಣದ ಈರುಳ್ಳಿ ದರ!

ಬೆಂಗಳೂರು: ರಾಜ್ಯದಲ್ಲಿ ವಾರದಿಂದೀಚೆಗೆ ಈರುಳ್ಳಿ ಸಗಟು ದರ ಇಳಿಮುಖವಾಗಿದೆ. ಆದರೆ, ಅದಕ್ಕೆ ತಕ್ಕಂತೆ ಎಲ್ಲೆಡೆಯೂ ಚಿಲ್ಲರೆ ಮಾರಾಟ ದರದಲ್ಲಿ ಇಳಿಕೆ ಆಗಿಲ್ಲ.

ಬೆಂಗಳೂರು, ದಾವಣಗೆರೆ, ಹುಬ್ಬಳ್ಳಿ, ಧಾರವಾಡದಲ್ಲಿ ಚಿಲ್ಲರೆ ದರ ತಗ್ಗಿಲ್ಲ. ಆದರೆ, ರಾಮನಗರ, ತುಮಕೂರು, ಚಿಕ್ಕಬಳ್ಳಾಪುರ ಕಲಬುರಗಿ, ಮಂಗಳೂರಿನಲ್ಲಿ ಸ್ವಲ್ಪ ಮಟ್ಟಿಗೆ ಇಳಿಕೆ ಕಂಡಿದೆ. ಮಾರುಕಟ್ಟೆಗೆ ಆಮದು ಹೆಚ್ಚಾಗುತ್ತಿರುವುದರಿಂದ ಸಗಟು ದರ ಇಳಿಕೆ ಕಾಣುತ್ತಿದೆ. ಬೆಂಗಳೂರಿನಲ್ಲಿ ಈರುಳ್ಳಿ ಸಗಟು ದರವು ಒಂದು ವಾರದಿಂದಲೂ ಇಳಿಮುಖವಾಗಿದೆ. ಆದರೆ, ಚಿಲ್ಲರೆ ಮಾರಾಟ ದರದಲ್ಲಿ ಮಾತ್ರ ಯಾವುದೇ ವ್ಯತ್ಯಾಸ ಕಾಣುತ್ತಿಲ್ಲ.

ಇದನ್ನೂ ಓದಿ: ನ.27ರಂದು ತಿಮ್ಮಪ್ಪನ ದರ್ಶನ ಪಡೆಯಲಿರುವ ಪ್ರಧಾನಿ ಮೋದಿ!

ಈಗಲೂ ಕೆ.ಜಿಗೆ 70–80ರವರೆಗೆಮಾರಾಟ ಆಗುತ್ತಿದೆ. ಈರುಳ್ಳಿ ಸಗಟು ದರ ಒಂದು ವಾರದಿಂದ ಇಳಿಕೆ ಕಾಣುತ್ತಿದ್ದು, ಸದ್ಯ ಕೆ.ಜಿಗೆ 35–40ರವರೆಗೆ ಇದೆ. ಪೂರೈಕೆ ಹೆಚ್ಚಾಗುತ್ತಿರುವುದರಿಂದ ಸಗಟು ಬೆಲೆ ಕಡಿಮೆ ಆಗುತ್ತಿದೆ ಎಂದು ಬೆಂಗಳೂರು ಆಲೂಗಡ್ಡೆ ಮತ್ತು ಈರುಳ್ಳಿ ವರ್ತಕರ ಸಂಘದ ಕಾರ್ಯದರ್ಶಿ ರವಿಶಂಕರ್ ತಿಳಿಸಿದರು.

RELATED ARTICLES

Related Articles

TRENDING ARTICLES