Wednesday, January 22, 2025

ಮೋದಿ ಎಂದರೆ ಭರವಸೆಗಳನ್ನು ಪೂರೈಸುವ ಗ್ಯಾರಂಟಿ : ಪ್ರಧಾನಿ ಮೋದಿ

ತೆಲಂಗಾಣ : ಮೋದಿಯವರ ಗ್ಯಾರಂಟಿ ಎಂದರೆ ಭರವಸೆಗಳನ್ನು ಪೂರೈಸುವ ಗ್ಯಾರಂಟಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ತೆಲಂಗಾಣದ ಮಹೇಶ್ವರಂನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಭರವಸೆ ನೀಡಿದ್ದನ್ನು ಈಡೇರಿಸುತ್ತಿದೆ. ತೆಲಂಗಾಣದಲ್ಲಿ ಬಿ.ಸಿ.ಯನ್ನು ಸಿಎಂ ಮಾಡುವುದಾಗಿ ಬಿಜೆಪಿ ಭರವಸೆ ನೀಡಿದ್ದರಿಂದ ಇಂದು ಹಿಂದುಳಿದ ವರ್ಗದ ಜನರು ಸಂತಸಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ತೆಲಂಗಾಣ ಜನತೆ ಬಿಆರ್‌ಎಸ್ ಮತ್ತು ಕಾಂಗ್ರೆಸ್ ನಾಯಕರ ನಿಜವಾದ ಮುಖವನ್ನು ಕಂಡಿದ್ದಾರೆ. ಕೆಸಿಆರ್ ಅವರ ಓಲೈಕೆ ನೀತಿಯಿಂದ ಬೇಸತ್ತಿದ್ದಾರೆ. ಈ ಚುನಾವಣೆಯಲ್ಲಿ ಈ ಪಕ್ಷಗಳಿಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ ಬಗ್ಗೆ ಎಚ್ಚರದಿಂದಿರಬೇಕು

ಕಾಲ ಬದಲಾಗುತ್ತಿದೆ, ಬಿಜೆಪಿ ಮೇಲಿನ ನಿಮ್ಮ ನಂಬಿಕೆ ತೆಲಂಗಾಣವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ. ಆದರೆ, ನೀವು ಕಾಂಗ್ರೆಸ್ ಮತ್ತು ಬಿಆರ್‌ಎಸ್‌ನ ಬಗ್ಗೆ ಎಚ್ಚರದಿಂದಿರಬೇಕು. ಅವರ ಸದಸ್ಯರು ಇಲ್ಲಿ ಸುಳ್ಳು ಮಾಹಿತಿಗಳನ್ನು ಪ್ರಚಾರ ಮಾಡುತ್ತಲೇ ಇರುತ್ತಾರೆ. ಒಬ್ಬರ ಮೇಲೊಬ್ಬರು ಆರೋಪ ಪ್ರತ್ಯಾರೋಪಗಳನ್ನು ಮಾಡಿದರೂ ಒಳಗೊಳಗೆ ಒಟ್ಟಿಗೆ ಇರುತ್ತಾರೆ ಎಂದು ಕುಟುಕಿದ್ದಾರೆ.

KCR ದ್ರೌಪದಿ ಮುರ್ಮು ವಿರುದ್ಧ ನಿಂತರು

ಕಾಂಗ್ರೆಸ್ ಮತ್ತು ಬಿಆರ್‌ಎಸ್ ನಂಟು ದಶಕಗಳಷ್ಟು ಹಳೆಯದು. ರಚನೆಯಾದ ಮೇಲೆ ಅವರು ಕಾಂಗ್ರೆಸ್‌ಗೆ ತೆರಳಿದರು. ರಾಷ್ಟ್ರಪತಿ ಚುನಾವಣೆ ವೇಳೆ ದ್ರೌಪದಿ ಮುರ್ಮು ವಿರುದ್ಧ ನಿಂತು ಕಾಂಗ್ರೆಸ್‌ಗೆ ಬೆಂಬಲಿಸಿದರು. ಬಿಜೆಪಿ ವಿರುದ್ಧ ಸಂಸತ್ತಿನಲ್ಲಿ ಅವಿಶ್ವಾಸ ಗೊತ್ತುವಳಿ ಮಂಡಿಸಿದಾಗಲೂ ಅವರು ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದರು. ನಿಮ್ಮ ಆಕಾಂಕ್ಷೆಗಳಿಗಾಗಿ ಕೆಲಸ ಮಾಡುವ ಏಕೈಕ ವಿಶ್ವಾಸಾರ್ಹ ಪಕ್ಷವೆಂದರೆ ಅದು ಬಿಜೆಪಿ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

RELATED ARTICLES

Related Articles

TRENDING ARTICLES