Wednesday, January 22, 2025

ಡಿ.ಕೆ. ಶಿವಕುಮಾರ್ ಸ್ವಯಂ ಘೋಷಿತ ನಿರಪರಾಧಿ : ಡಿಕೆಶಿ ಜೈಲಿನಲ್ಲಿರುವ ಪೋಸ್ಟರ್ ರಿಲೀಸ್

ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್​ ನಡುವೆ ಪೋಸ್ಟರ್ ವಾರ್ ಮತ್ತೆ ಜೋರಾಗುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟರ್ ಒಂದನ್ನು ರಿಲೀಸ್ ಮಾಡಿರುವ ಬಿಜೆಪಿ, ಡಿ.ಕೆ. ಶಿವಕುಮಾರ್​ ಅವರನ್ನು ಜೈಲಿನಲ್ಲಿರುವಂತೆ ಬಿಂಬಿಸಿದೆ. ಈ ಪೋಸ್ಟ್​ಗೆ ಒಂದು ಆಕರ್ಷಕ ಟೈಟಲ್ ನೀಡಲಾಗಿದೆ.

ಡಿ.ಕೆ. ಶಿವಕುಮಾರ್ ಅವರ ಕೊರಳಿಗೆ ‘ಸ್ವಯಂ ಘೋಷಿತ ನಿರಪರಾಧಿ’ ಎಂಬ ಬೋರ್ಡ್​ ಅನ್ನು ಹಾಕಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವ ಸಂಪುಟದ ಸದಸ್ಯರು ಹೊರಗಡೆ ಕುಳಿತಿರುವ ಪೋಸ್ಟರ್ ಹಂಚಿಕೊಂಡಿದೆ.

ಈ ಸುದ್ದಿ ಓದಿದ್ದೀರಾ? : ಸಿದ್ದರಾಮಯ್ಯ ಇದರಲ್ಲಿ ಪಾಲುದಾರ ಆಗಲು ಹೊರಟಿದ್ದಾರೆ : ಯಡಿಯೂರಪ್ಪ ಗುಡುಗು

ಡಿಕೆಶಿ ಪಾರು ಮಾಡಿದ್ದೇ ಸಿಎಂ

ಭ್ರಷ್ಟರಿಂದ, ಭ್ರಷ್ಟರಿಗಾಗಿ, ಭ್ರಷ್ಟರಿಗೋಸ್ಕರ ಇರುವ ಕಾಂಗ್ರೆಸ್ ಸರ್ಕಾರ ಎಂದು ಬರೆದು ಕಾಂಗ್ರೆಸ್​ ಸರ್ಕಾರವನ್ನು ಲೇವಡಿ ಮಾಡಿದೆ. ಕಾಂಗ್ರೆಸ್‌ನ ಭ್ರಷ್ಟಾಚಾರ, ಗೂಂಡಾಗಳ ಮಹಾಪೋಷಕರು ಮುಖ್ಯಮಂತ್ರಿ ಸಿದ್ದರಾಮಯ್ಯ. ಭ್ರಷ್ಟರ ಪಾಲಿನ ಆಲದಮರ ಹಾಗೂ ಪೋಷಕ. ಡಿ.ಕೆ. ಶಿವಕುಮಾರ್ ಅವರನ್ನು 380 ಪಟ್ಟು ಅಕ್ರಮ ಆಸ್ತಿ ಪ್ರಕರಣದಿಂದ ಪಾರು ಮಾಡಿದ್ದೇ ಈ ಭ್ರಷ್ಟ ಪೋಷಕ ಎಂದು ವಾಗ್ದಾಳಿ ನಡೆಸಿದೆ.

RELATED ARTICLES

Related Articles

TRENDING ARTICLES