ಬೆಂಗಳೂರು : ಡಿ.ಕೆ. ಶಿವಕುಮಾರ್ ಅವರ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಸಿಬಿಐ ತನಿಖೆ ಅಮಾನತು ವಿಚಾರ ಸಂಬಂಧ ಪ್ರತಿಕ್ರಿಯಿಸಿರುವ ಶಾಸಕ ಜನಾರ್ದನ ರೆಡ್ಡಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ನಾಗೇಂದ್ರ ಮೇಲೆ 25 ಚಾರ್ಜ್ ಶೀಟ್ ಇದ್ವು. ಸಿದ್ದರಾಮಯ್ಯ ಸರ್ಕಾರದಲ್ಲಿ ಡಿ.ಕೆ. ಶಿವಕುಮಾರ್ಗೆ ಒಂದು ನ್ಯಾಯ, ಸಚಿವ ನಾಗೇಂದ್ರಗೆ ಒಂದು ನ್ಯಾಯವೇ? ನಾಗೇಂದ್ರ ಸಿಬಿಐ ಕೇಸ್ ಗಳಲ್ಲಿ ಅಕ್ಯೂಸ್ಡ್ ಆಗಿದ್ದಾರೆ. ಅದರ ಬಗ್ಗೆ ಸಿದ್ದರಾಮಯ್ಯ ಉತ್ತರಿಸೋಕೆ ಹೇಳಿ ಎಂದು ಕುಟುಕಿದರು.
ಹಿಂದೆ ಸಿಬಿಐ, ಲೋಕಾಯುಕ್ತ ಕೇಸ್ ಆಗಿದ್ವು. ಹಿಂದೆ ನನ್ನ ಮೇಲೆ ಸಿದ್ರಾಮಯ್ಯ ಕೊಟ್ಟಿದ್ರು. ಸಿಎಂ ಆಗಿದ್ದಾಗ ಗಣಿ ವಿಚಾರದಲ್ಲಿ ಶಿಫಾರಸು ಮಾಡಿದ್ರು. ಒಂದು ಎಸ್ಐಟಿಯನ್ನ ರಚನೆ ಮಾಡಿದ್ರು. ಡಿಕೆಶಿ ವಿಚಾರದಲ್ಲೂ ಐಟಿ ರೇಡ್ ನಂತರ ಸಿಬಿಐ ಕೇಸ್ ಆಗಿತ್ತು. ಗಣಿ ಹಗರಣದ ವಿಚಾರದಲ್ಲಿ ಸಿದ್ದರಾಮಯ್ಯ ಏನು ಮಾಡಿದ್ರು? ಗಣಿ ಅಕ್ರಮದ ಹಣ ರಿಕವರಿ ಮಾಡಿದ್ರಾ? ಪ್ರಶ್ನಿಸಿದರು.
ಡಿಕೆಶಿಗೆ ನ್ಯಾಯ ಕೊಟ್ಟು ನಾಗೇಂದ್ರಗೆ ಯಾಕೆ ಬಿಟ್ರಿ?
ಜನಾರ್ದನ ರೆಡ್ಡಿ ಮೇಲೆ 5 ಕೇಸ್ ಇದ್ವು, ಅವರ ಮಂತ್ರಿ ಮೇಲೆ 25 ಕೇಸ್ ಇದ್ವು. ಡಿಕೆಶಿಗೆ ನ್ಯಾಯ ಕೊಟ್ಟು ನಾಗೇಂದ್ರಗೆ ಯಾಕೆ ಬಿಟ್ರಿ? ಪಾಪ ನಾಗೇಂದ್ರ ಏನು ಅನ್ಯಾಯ ಮಾಡಿದ್ದಾರೆ ಎಂದು ಸಚಿವ ನಾಗೇಂದ್ರ ಪರ ಜನಾರ್ದನ ರೆಡ್ಡಿ ಬ್ಯಾಟಿಂಗ್ ಮಾಡಿದರು.