Friday, December 27, 2024

ಅಮಿತ್ ಶಾ ನಮ್ಮನೆಯಲ್ಲಿ ಕುಳಿತುಕೊಂಡು ಜೀವ ತೆಗೆದರು : ವಿ.ಸೋಮಣ್ಣ ಅಳಲು

ತುಮಕೂರು: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಚಿವ ವಿ.ಸೋಮಣ್ಣ ವರುಣ ಮತ್ತು ಚಾಮರಾಜನಗರದಲ್ಲಿ ಸ್ಪರ್ಧಿಸಿ ಸೋತಿದ್ದಾರೆ.

ಸೋಲಿನ ಬೇಸರವನ್ನು ತುಮಕೂರು ಸಿದ್ಧಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ಬಳಿ ಹಂಚಿಕೊಂಡಿದ್ದಾರೆ. “ಇಲ್ಲಿ ಬಿಟ್ಟು ಅಲ್ಲಿ ಸ್ಪರ್ಧೆ ಮಾಡಿದ್ದೇ ನನ್ನ ಮಹಾ ಅಪರಾಧವಾಯ್ತು. ಕೇಂದ್ರ ಗೃಹ ಅಮಿತ್ ಶಾ ನಮ್ಮ ಮನೆಯಲ್ಲಿ ಕುಳಿತುಕೊಂಡು ಜೀವ ತೆಗೆದರು. ಎರಡು ಗಂಟೆ ಮನೆಯಲ್ಲಿ ಕುಳಿತುಕೊಂಡಿದ್ದರು, ಆಗಲ್ಲ ಅಂತಾ ಹೇಳಿದ್ದೆ. ಪ್ರಧಾನಿ ಮೋದಿಯವರು ದೆಹಲಿಗೆ ಕರೆಸಿ ನೀನು ಸ್ಪರ್ಧೆ ಮಾಡು ಅಂದರು, ಏನ್ಮಾಡಲಿ” ಎಂದು ಬೇಸರ ವ್ಯಕ್ತಪಡಿಸಿದರು.

ಈ ಮೂಲಕ ತಾವು ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಲು ಕಾರಣವೇನು ಎಂಬುವುದರ ಹಿಂದಿನ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ: ಕೆಇಎ ಪರೀಕ್ಷೆಯಲ್ಲಿನ ಅಕ್ರಮ : ಮತ್ತೆ 8 ದಿನ ಸಿಐಡಿ ಕಸ್ಟಡಿಗೆ ಆರ್. ಡಿ…  

ಸಿದ್ಧಗಂಗಾ ಮಠಕ್ಕೆ ವಿ ಸೋಮಣ್ಣ ಭೇಟಿ ನೀಡಿದ ಹಿನ್ನೆಲೆಯಲ್ಲಿ ಸಂಸದ ಜಿ.ಎಸ್.ಬಸವರಾಜು ಕೂಡ ಮಠಕ್ಕೆ ತೆರಳಿದರು. ಜಿ.ಎಸ್​ ಬಸವರಾಜು ಅವರಿಗೆ ವಿ.ಸೋಮಣ್ಣ ಡಿಸೆಂಬರ್​ 6ರಂದು ಸಿದ್ಧಗಂಗಾ ಮಠದ ಆವರಣದಲ್ಲಿ ನಡೆಯುವ ಗುರುಭವನ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನಿಸಿದರು.

ಇನ್ನು ಡಿಸೆಂಬರ್ 7 ರಂದು ವಿ ಸೋಮಣ್ಣ, ಶಾಸಕರಾ ಬಸನಗೌಡ ಯತ್ನಾಳ ಪಾಟೀಲ್​, ರಮೇಶ್​ ಜಾರಕಿಹೊಳಿ ದೆಹಲಿಗೆ ತೆರಳಲಿದ್ದಾರೆ. ಡಿ. 7, 8, 9ರಂದು ಹೈಕಮಾಂಡ್​ ನಾಯಕರ ಭೇಟಿಯಾಗಲಿದ್ದೇವೆ ಎಂದು ಮಾಜಿ ಸಚಿವ ಸೋಮಣ್ಣ ಹೇಳಿದರು.

RELATED ARTICLES

Related Articles

TRENDING ARTICLES