Monday, December 23, 2024

ಲಿಂಗಾಯತ ಅಂತ ಹೋದವರೆಲ್ಲ ಮಣ್ಣು ಕಚ್ಚಿದ್ದಾರೆ : ಶಾಮನೂರು ಶಿವಶಂಕರಪ್ಪ ಕಿಡಿ

ಬೆಂಗಳೂರು : ಪ್ರತ್ಯೇಕ ಲಿಂಗಾಯದ ಧರ್ಮ ಅಂತ ಹೋದವರೆಲ್ಲ ಸೋತರು. ಬರೀ ಲಿಂಗಾಯತ ಅಂತ ಹೋದವರೆಲ್ಲ ಮಣ್ಣು ಕಚ್ಚಿದ್ರು ಎಂದು ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ಅಧ್ಯಕ್ಷ ಹಾಗೂ ಕಾಂಗ್ರೆಸ್​ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಗುಡುಗಿದರು.

ಬೆಂಗಳೂರಿನ ಅಖಿಲ ಭಾರತ ವೀರಶೈವ ಮಹಾಸಭಾ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರಿಯಾದ ರೀತಿಯಲ್ಲಿ ಜಾತಿ ಜನಗಣತಿ ಆಗಿಲ್ಲ ಎಂದು ಕುಟುಕಿದರು.

ಬಸವರಾಜರಾಯರೆಡ್ಡಿ ಹೇಳಿಕೆಗೆ ತರಾಟೆ ತೆಗೆದುಕೊಂಡ ಅವರು, ಅವನು ಹಿಂದೆ ಹೀಗೆ ಏನೇನೋ ಮಾತನಾಡ್ತಾ ಇದ್ದ. ಅವನು ಕ್ಯಾಬಿನೆಟ್ ಹೊರಗಿದ್ದಾನೆ, ಅದಕ್ಕೆ ಏನೇನೋ ಮಾತನಾಡುತ್ತಿದ್ದಾನೆ. ಬರೀ ಲಿಂಗಾಯತ ಅಂತ ಹೋದವರೆಲ್ಲ ಮಣ್ಣು ಕಚ್ಚಿದ್ದಾರೆ ಎಂದು ಚಾಟಿ ಬೀಸಿದರು.

ಮೂಲ ವರದಿ ನಾಪತ್ತೆ ಆಗಿದೆ. ನಾನು ಕೊಟ್ಟಿದ್ದೀನಿ ಅಂತ ಕಾಂತರಾಜ್ ಹೇಳುತ್ತಿದ್ದಾರೆ. ಇದು ನೋಡೋಕೆ ಮಜಾ ಐತಿ. ಆಯೋಗದ ಅಧ್ಯಕ್ಷರ ಅವಧಿ ವಿಸ್ತರಣೆ ಆಗಿದೆ. ಜನಗಣತಿ ಮಾಡಿ, ಮನೆ ಮನೆಗೆ ಹೋಗಿ ಸಮಿಕ್ಷೆ ಮಾಡಿ. ಎಲ್ಲೋ ಕೂತು ಜನಗಣತಿ ಮಾಡುವುದಲ್ಲ. ಜಾತಿ ಜನಗಣತಿ ವರದಿ ಸರಿ ಇಲ್ಲ ಎಂದು ಕಿಡಿಕಾರಿದರು.

ಜನಗಣತಿ ವರದಿಗೆ ಎಲ್ಲರ ವಿರೋಧವಿದೆ

ವೈಜ್ಞಾನಿಕವಾಗಿ ಸಮೀಕ್ಷೆ (ಜನಗಣತಿ) ಆಗಬೇಕು. ಅವರು ಏನು ಮಾಡುತ್ತಾರೆಯೋ ನೋಡಬೇಕಿದೆ. ಅವರು ವರದಿ ತೆಗೆದುಕೊಂಡ ಬಳಿಕ ಏನು ಮಾಡಬೇಕು ನೋಡುತ್ತೇನೆ. ಅದು ಲೋಪದಿಂದ ಕೂಡಿದೆ ಎಂದೇ ನಾವು ವಿರೋಧ ಮಾಡುತ್ತಿದ್ದೇವೆ. ವರದಿಯಲ್ಲಿ ಏನಿದೆ ಅಂತ ಅದೆಲ್ಲ ಲೀಕ್ ಆಗಿದೆ. ಲಿಂಗಾಯತ ವೀರಶೈವ ಅಂತ ಬರೆದುಕೊಂಡೇ ಇಲ್ಲ. ಅನೇಕ ಲೋಪದೋಷಗಳು ಎದ್ದು ಕಾಣುತ್ತಿದೆ. ಈ ಸಮಿಕ್ಷೆಯ ವರದಿಗೆ ಎಲ್ಲರ ವಿರೋಧವಿದೆ. ನಾವೂ ಸಹ ಸಿಎಂ ಭೇಟಿ ಮಾಡ್ತೀವಿ. ಒಕ್ಕಲಿಗ ಸಮುದಾಯದ ರೀತಿಯೇ ಸಹಿ ಮಾಡಿ ವಿರೋಧ ವ್ಯಕ್ತಪಡಿಸುತ್ತೇವೆ ಎಂದು ಶಾಮನೂರು ಶಿವಶಂಕರಪ್ಪ ಹೇಳಿದರು.

RELATED ARTICLES

Related Articles

TRENDING ARTICLES