Monday, December 23, 2024

ಬಿಜೆಪಿಯಲ್ಲಿ ಬೆಂಕಿ ಬಿದ್ದಿದೆ : ಸಚಿವ ತಿಮ್ಮಾಪೂರ

ಬಾಗಲಕೋಟೆ : ಬಿಜೆಪಿಯಲ್ಲಿ ಬೆಂಕಿ ಬಿದ್ದಿದೆ, ಆ ಬೆಂಕಿ ಆರಿಸೋದೇ ಅವರ ದಂಧೆ ಆಗಿದೆ. ಅವರ ಪಕ್ಷದಲ್ಲಿ ಏನೇನು ಐತೋ ನನಗ ಗೊತ್ತಿಲ್ಲ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ ಕುಟುಕಿದರು.

ಬಾಗಲಕೋಟೆ ಜಿಲ್ಲೆ ಹುನಗುಂದ ತಾಲ್ಲೂಕಿನ ರಕ್ಕಸಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷದಲ್ಲಿ ಅಸಮಾಧಾನ ಅಂತು ಇದೆ. ಲೋಕಸಭಾ ಚುನಾವಣೆಯಲ್ಲಿ ಸ್ಫೋಟ ಆಗುತ್ತೆ ಎಂದು ಛೇಡಿಸಿದರು.

ಬಿಜೆಪಿ ಶಾಸಕರು ಹೆಚ್ಚಾಗಿ ಸಿಎಂ ಪರ ಮಾತನಾಡುತ್ತಿರುವ ಹಿಂದಿನ ಗುಟ್ಟೇನು ಎಂಬ ಪ್ರಶ್ನೆಗೆ, ನೀವೆ ಅರ್ಥ ಮಾಡಿಕೊಳ್ಳಿ. ನಾವೂ ಹೇಳುವ ಅವಶ್ಯಕತೆ ಇದೆಯಾ? ಲೋಕಸಭಾ ಚುನಾವಣೆ ವೇಳೆಗೆ ತುಂಬಾ ಜನ ಬರ್ತಾರೆ. ಎಷ್ಟು ಜನ ಬರ್ತಾರೆ ಅಂತ ಏನು ಲೆಕ್ಕ ಹಾಕೋಣ. ಸ್ಲೋಲಿ ಎಲ್ಲರೂ ನಮ್ಮ ಪರ ಮಾತನಾಡ್ತಿದ್ದಾರೆ ಎಂದು ಆಪರೇಷನ್ ಕಮಲದ ಬಗ್ಗೆ ಸುಳಿವು ನೀಡಿದರು.

ಎಲ್ಲದರಲ್ಲೂ ಮೂಗು ತೂರಿಸುತ್ತಾರೆ

ಸಿಎಂ ಸ್ಥಾನ ಉಳಿಸಿಕೊಳ್ಳಲಿಕ್ಕೆ ಸಿಬಿಐ ಕೇಸ್ ಹಿಂತೆಗೆದುಕೊಳ್ಳಲಾಗಿದೆ ಎಂಬ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಹೇಳಿಕೆಗೆ, ಅವರಿಗೆ ಏನ ಗೊತ್ತಿದೆಯೋ ನನಗೆ ಗೊತ್ತಿಲ್ಲ. ಅವರು ಎಲ್ಲದರಲ್ಲೂ ಮೂಗು ತೂರಿಸುತ್ತಾರೆ. ಏನೂ ಗೊತ್ತೇ ಇರಲ್ಲ, ಅದನ್ನ ಅರ್ಥ ಮಾಡಿಕೊಳ್ಳೋಕೆ ನಂಗೂ ಟೈಮ್ ಬೇಕು ಎಂದು ಸಚಿವ ತಿಮ್ಮಾಪೂರ ಹೇಳಿದರು.

RELATED ARTICLES

Related Articles

TRENDING ARTICLES