Thursday, December 26, 2024

ಸಿದ್ದರಾಮಯ್ಯನವರ ಕ್ಯಾಬಿನೆಟ್ ಡಿಕೆಶಿ ಪಾದದಡಿ ಇದೆ : ಹೆಚ್.ಡಿ. ಕುಮಾರಸ್ವಾಮಿ

ಹಾಸನ : ಸಿದ್ದರಾಮಯ್ಯನವರ ನೇತೃತ್ವದ ಕ್ಯಾಬಿನೆಟ್ ಡಿ.ಕೆ. ಶಿವಕುಮಾರ್ ಅವರ ಪಾದದಡಿ ಇದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕುಟುಕಿದ್ದಾರೆ.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಕಾನೂನುಬಾಹಿರ ಚಟುವಟಿಕೆ ಮಾಡಿ, ಅಕ್ರಮ ಆಸ್ತಿ ಸಂಪಾದನೆ ಮಾಡಿದ್ದಾರೆ ಎಂದು ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕನಕಪುರದ ಜನ ನನ್ನನ್ನ ಒಂದೂಕಾಲು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿದ್ದಾರೆ ಅಂತಾರಲ್ಲಾ.. ಪಾಪ ಅವರೆಲ್ಲಾ ಬಡತನದಲ್ಲೇ ಇದ್ದಾರೆ. ಇನ್ನೂ ಎರಡು ಹೊತ್ತು ಊಟಕ್ಕೂ ಗತಿಯಿಲ್ಲದ ಜನ ಇವತ್ತೂ ಇದ್ದಾರೆ ಅಲ್ಲಿ. ಅವರಿಗೂ ಈ ರೀತಿ 1,400 ಕೋಟಿ ಸಂಪಾದನೆ ಎರಡ್ಮೂರು ವರ್ಷದಲ್ಲಿ ಹೇಗೆ ಮಾಡಬಹುದು ಅಂತ ಹೇಳಿ ಕೊಡಲಿ ಎಂದು ಚಾಟಿ ಬೀಸಿದ್ದಾರೆ.

ಅವ್ರನ್ನ ದೇವರೇ ಕಾಪಾಡಬೇಕು

ಎರಡೇ ವರ್ಷದಲ್ಲಿ ಆದಾಯ 30 ಪರ್ಸೆಂಟು, 40 ಪರ್ಸೆಂಟು, 200 ಪರ್ಸೆಂಟು, 300 ಪರ್ಸೆಂಟು ಯಾವ ರೀತಿ ಹೆಚ್ಚಿಸಬಹುದು ಅನ್ನೋ ಕಲಿಕೆ ಇದ್ಯಲ್ಲಾ? ಆ ಪ್ರತಿಭೆ ಪಾಪ ಬಡವರಿಗೂ ಹೇಳಿಕೊಟ್ರೆ, ನಿಜಕ್ಕೂ ಆ ಬಡವರೂ ಪುಣ್ಯವಂತರಾಗ್ತಾರೆ. ಇವತ್ತು ಬೆಳಗ್ಗೆ ನೋಡ್ದೆ ನಿನ್ನೆ ಕ್ಯಾಬಿನೆಟ್ ನಲ್ಲಿ ಈ ರೀತಿ‌ ತೀರ್ಮಾನ ಆಗಿದ್ಯಾ? ನನಗೆ ವಿಷ್ಯವೇ ಗೊತ್ತಿಲ್ವಲ್ಲಾ, ತಿಳಿದುಬಿಟ್ಟು ಹೇಳ್ತೀನಿ ಅಂತೇಳಿ ಅವರು ಮಾಧ್ಯಮಗಳ ಮುಂದೆ ಹೇಳಿದ್ದಾರೆ. ದೇವರೇ ಕಾಪಾಡಬೇಕು ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

RELATED ARTICLES

Related Articles

TRENDING ARTICLES