ಬೆಂಗಳೂರು : ನಮ್ಮ ಇಲಾಖೆಗೂ (ಗೃಹ ಇಲಾಖೆ) ಹೆಚ್ಚು ಸಹಕಾರ ಬೇಕು ಎಂದು ವೇದಿಕೆ ಮೇಲೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅನುದಾನಕ್ಕೆ ಮನವಿ ಮಾಡಿದ್ದಾರೆ.
ಶಕ್ತಿ ಯೋಜನೆಗೆ ಶತಕೋಟಿ ಸಂಭ್ರಮ ಸಮಾರಂಭದಲ್ಲಿ ಮಾತನಾಡಿದ ಅವರು, ಸಾರಿಗೆ ಇಲಾಖೆಗೆ ಇನ್ನಷ್ಟು ಸಹಕಾರ ಕೊಡಿ ಎಂದು ಸಿಎಂ ಬಳಿ ರಾಮಲಿಂಗಾ ರೆಡ್ಡಿ ಕೇಳಿದ್ದಾರೆ. ನಾನು ಸಹ ಅವರಿಗೆ ಧ್ವನಿಗೊಡಿಸುತ್ತೇನೆ. ಹಾಗೆಯೇ ನಮ್ಮ ಇಲಾಖೆಗೂ ಸಹಕಾರ ಬೇಕು. ಬಳಿಕ ಸಾರಿಗೆ ಇಲಾಖೆಗೂ ಹೆಚ್ಚಿನ ಸಹಕಾರ ಕೊಡಬೇಕು ಎಂದು ಹೇಳಿದ್ದಾರೆ.
ನಾನು ಆಕಸ್ಮಿಕವಾಗಿ ಸಿಎಂ ಜೊತೆಗೆ ನಮ್ಮ ಇಲಾಖೆ ಕಾರ್ಯಕ್ರಮ ಮುಗಿಸಿ ಇಲ್ಲಿಗೆ ಬಂದಿದ್ದೇನೆ. ಆದರೂ ಕೂಡ ನನಗೆ ಸಂತೋಷ ಇದೆ. ಕಳೆದ ಬಾರಿ ಪ್ರಣಾಳಿಕೆ ತಯಾರಿಸುವ ಸಂದರ್ಭದಲ್ಲಿ ಸಿಎಂ ವರಿಷ್ಠರ ಜೊತೆ ಚರ್ಚೆ ಮಾಡುವಾಗ ನನ್ನ ಪ್ರಣಾಳಿಕೆ ಸಮಿತಿ ಅಧ್ಯಕ್ಷರು ಮಾಡಿದ್ದರು. ಈ ಶಕ್ತಿ ಯೋಜನೆ ಚರ್ಚೆ ಮಾಡುವಾಗ ಅನೇಕ ಪ್ರಶ್ನೆಗಳು ಬಂತು. ಸಿಎಂ ಅವರು ಈ ಕಾರ್ಯಕ್ರಮ ಮಾಡಲೇಬೇಕು ಅಂತ ಹೇಳಿದ್ದರು ಎಂದು ತಿಳಿಸಿದ್ದಾರೆ.
ಇಡೀ ದೇಶದಲ್ಲಿ ಮಾದರಿಯಾಗಿದೆ
ಸಂತೋಷದ ವಿಚಾರ ಅಂದ್ರೆ ಇಂದು 100 ಕೋಟಿ ಮಹಿಳೆಯರು ಬಸ್ನಲ್ಲಿ ಉಚಿತ ಪ್ರಯಾಣ ಮಾಡಿದ್ದಾರೆ. ಕರ್ನಾಟಕದ ಸಾರಿಗೆ ಸಂಸ್ಥೆ ಇಡೀ ದೇಶದಲ್ಲಿ ಮಾದರಿಯಾಗಿದೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಈ ಇಲಾಖೆ ಬಹಳ ಚನ್ನಾಗಿ ನಡೆಸಿಕೊಂಡು ಬರುತ್ತಿದ್ದಾರೆ ಎಂದು ಡಾ.ಜಿ. ಪರಮೇಶ್ವರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.