Wednesday, January 22, 2025

KCR ನಿದ್ರೆ ಮಾಡಬೇಡಿ, ನಿಮ್ಮ ಸಮಯ ಮುಗಿದಿದೆ : ಅಮಿತ್ ಶಾ

ತೆಲಂಗಾಣ : ವಿಧಾನಸಭಾ ಚುನಾವಣೆಗೆ ಮುನ್ನ BRS ಅಧ್ಯಕ್ಷ ಹಾಗೂ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ವಿರುದ್ಧ ಕೇಂದ್ರ ಗೃಹ ಸಚಿವ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ.

ಆರ್ಮೂರ್​​​ನಲ್ಲಿ ಇಂದು ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, KCR ಸಾವಿರಾರು ಕೋಟಿ ರೂಪಾಯಿಗಳ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಆದರೆ, ಅದರಿಂದ ತಮಗೆ ಏನೂ ತೊಂದರೆಯಾಗುವುದಿಲ್ಲ ಅಂತ ಭಾವಿಸಿದ್ದಾರೆ ಎಂದು ಕುಟುಕಿದ್ದಾರೆ.

ಮುಂದುವರಿದು KCR ಅವರೇ, ನಿದ್ರೆ ಮಾಡಬೇಡಿ. ನಿಮ್ಮ ಸಮಯ ಮುಗಿದಿದೆ. ಏನೇ ಹಗರಣಗಳು ನಡೆದಿದ್ದರೂ ಬಿಜೆಪಿ ಸರ್ಕಾರ ತನಿಖೆ ನಡೆಸಿ ಭ್ರಷ್ಟಾಚಾರದಲ್ಲಿ ತೊಡಗಿರುವವರನ್ನು ಕಂಬಿ ಹಿಂದೆ ಕಳುಹಿಸುತ್ತದೆ ಎಂದು ಅಮಿತ್ ಶಾ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಹಿಂದುಳಿದ ವರ್ಗಕ್ಕೆ ಸಿಎಂ ಪಟ್ಟ

ಕಳೆದ 10 ವರ್ಷಗಳಲ್ಲಿ ತೆಲಂಗಾಣವನ್ನು ಬಿಆರ್‌ಎಸ್ ಸರ್ಕಾರ ನಾಶ ಮಾಡಿದೆ. ಅವರು ನೀಡಿದ ಭರವಸೆಗಳನ್ನು ಈಡೇರಿಸಲು ವಿಫಲರಾಗಿದ್ದಾರೆ. ಬಿಆರ್‌ಎಸ್ ಮಾಡಿದ್ದು ಒಂದೇ ಅದು ಭ್ರಷ್ಟಾಚಾರ. ದಲಿತ ಸಮುದಾಯದವರನ್ನು ಸಿಎಂ ಮಾಡುತ್ತೇನೆ ಎಂದು ಕೆಸಿಆರ್ ಭರವಸೆ ನೀಡಿದ್ದರು. ಇಂದು ನಿಮ್ಮೆಲ್ಲರ ಸಮ್ಮುಖದಲ್ಲಿ ಬಿಜೆಪಿ ಹಿಂದುಳಿದ ವರ್ಗಕ್ಕೆ ಸೇರಿದ ಸಿಎಂ ನೀಡುವುದಾಗಿ ಹೇಳಲು ಬಯಸುತ್ತೇನೆ ಎಂದು ಭರವಸೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES