Thursday, December 19, 2024

ಕಾಂಗ್ರೆಸ್ ಭ್ರಷ್ಟಾಚಾರದ ಅಂಗಡಿ ತೆರೆದಿದೆ : ಆರ್. ಆಶೋಕ್

ಬೆಂಗಳೂರು: ಅಧಿಕಾರಕ್ಕೆ ಬಂದ ದಿನದಿಂದಲೇ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದ ಅಂಗಡಿ ತೆರೆದಿದೆ ಎಂದು ವಿಪಕ್ಷ ನಾಯಕ ಆಶೋಕ್ ಟೀಕಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಆಪರೇಷನ್ ಕಮಲಕ್ಕೆ ಕೈಹಾಕಲ್ಲ. ಸರ್ಕಾರ ಅಧಿಕಾರಕ್ಕೆ ಬಂದ 6 ತಿಂಗಳಲ್ಲಿಯೇ ಕುಲಗೆಟ್ಟು ಹೋಗಿದೆ. ಸೋರುತಿಹುದು ಕಾಂಗ್ರೆಸ್‌ನ ಮನೆಯ ಮಾಳಿಗೆ ಎಂಬಂತಾಗಿದೆ ಎಂದು ಲೇವಡಿ ಮಾಡಿದರು.

ಇದನ್ನೂ ಓದಿ: ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ರೋಚಕ ಗೆಲುವು

ಕಾಂಗ್ರೆಸ್‌ನಲ್ಲಿ ಹಲವು ಬಣಗಳಾಗಿದ್ದು, ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ತೆಗೆಯುವುದು ನಿಶ್ಚಿತ ಎಂದು ಅಶೋಕ್ ಭವಿಷ್ಯ ನುಡಿದರು. ಕಾಂಗ್ರೆಸ್ ಭ್ರಷ್ಟಾಚಾರದ ಅಂಗಡಿ ತೆರೆದಿದೆ.

RELATED ARTICLES

Related Articles

TRENDING ARTICLES