Sunday, December 22, 2024

ಪವರ್ ಟಿವಿ ಇಂಪ್ಯಾಕ್ಟ್ : ಕರ್ತವ್ಯ ಲೋಪ ಎಸಗಿದ ಪೊಲೀಸ್ ಸಿಬ್ಬಂದಿ ಅಮಾನತು

ಬೆಳಗಾವಿ : ಪವರ್ ಟಿವಿ ಇಂಪ್ಯಾಕ್ಟ್ ಬೆನ್ನಲ್ಲೇ ಚಿಕ್ಕೋಡಿಯಲ್ಲಿ ಪೋಲಿಸ್ ಇಲಾಖೆ 112 ವಾಹನ ಜೊತೆ ಸರಾಯಿ ಪಾರ್ಟಿ ಪ್ರಕರಣದಲ್ಲಿ, ಕರ್ತವ್ಯ ಲೋಪ ಎಸಗಿದ ಇಬ್ಬರು ಪೊಲೀಸ್ ಸಿಬ್ಬಂದಿಗಳ ಅಮಾನತು ಗೊಂಡಿದ್ದಾರೆ.

ಅಮಾನತು ಗೊಂಡಿರುವ ಬಗ್ಗೆ ಬೆಳಗಾವಿಯಲ್ಲಿ ಎಸ್​​​ಪಿ ಡಾ.ಭೀಮಾಶಂಕರ ಗುಳೇದ್ ಹೇಳಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ಖಡಕಲಾಟ್ ಪೊಲೀಸ್ ಠಾಣೆಯ ಇಬ್ಬರು ಪೊಲೀಸ್ ಸಿಬ್ಬಂದಿಗಳ ಕರ್ತವ್ಯ ಲೋಪ ಎಸಗಿದ್ರು ಎಂದು ಹೇಳಿದ್ದಾರೆ.

112 ಪೆಟ್ರೋಲಿಂಗ್ ವಾಹನದಲ್ಲಿ ಕರ್ತವ್ಯದಲ್ಲಿ ಇದ್ದಾಗ ಪೊಲೀಸ್ ಸಿಬ್ಬಂದಿ ಊಟ ಮಾಡುವ ನೆಪದಲ್ಲಿ ಸಾರಾಯಿ ಸೇವನೆ ಮಾಡಿರುವ ಬಗ್ಗೆ ನನ್ನ ಗಮನಕ್ಕೆ ಬಂದ ತಕ್ಷಣ ಅವರ ಮೇಲೆ ಶಿಸ್ತು ಕ್ರಮಕ್ಕೆ ಅದೇಶ ಮಾಡಿದ್ದೇನೆ. ತಕ್ಷಣವೇ ಇಬ್ಬರು ಪೊಲೀಸ್ ಸಿಬ್ಬಂದಿಗಳು ಸರಾಯಿ ಸೇವೆನೆ ಮಾಡಿದ್ದಾರೆಂದು ಅಮಾನತು ಮಾಡಿ ಆದೇಶ ಮಾಡಿದ್ದೇನೆ. ಅಲ್ಲದೇ ಚಿಕ್ಕೋಡಿ ಮತ್ತು ಖಡಕಲಾಟ್ ಎರಡು ಠಾಣೆ ಪಿಎಸ್ಐಗೆ ಶೋಕಾಸ ನೋಟಿಸ್ ನೀಡಿದ್ದೇನೆ. ಚಿಕ್ಕೋಡಿ DSPಗೆ ಪ್ರಕರಣದ ಕುರಿತು ವರದಿ ಸಲ್ಲಿಕೆ ಮಾಡಲು ಆದೇಶ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

ತುರ್ತು ಸಂದರ್ಭದಲ್ಲಿ ಇವರಿಂದ ಸಹಾಯ ಸಾಧ್ಯವೇ?

KA-22 G1818 ನಂಬರ್‌ನ 112 ಪೊಲೀಸ್ ವಾಹನದ ಸಿಬ್ಬಂದಿ ಹೆಡ್‌ ಕಾನ್ಸ್‌ಟೇಬಲ್‌ ಕಮತೆ, ಕಾನ್ಸ್‌ಟೇಬಲ್‌ ಧುಮಾಳ ಕರ್ತವ್ಯ ಲೋಪವನ್ನೂ ಮಾಡುತ್ತಿದ್ದಾರೆ. ಇವರೇ ಇಂತಹ ಕೃತ್ಯ ಮಾಡಿದ್ರೆ ತುರ್ತು ಸಂದರ್ಭದಲ್ಲಿ ಇವರಿಂದ ಸಹಾಯ ಹೇಗೆ ಸಾಧ್ಯ? ಎಣ್ಣೆ ಅಮಲಿನಲ್ಲಿರುವ ಸಿಬ್ಬಂದಿಯಿಂದ ರಕ್ಷಣೆ ಹೇಗೆ ಸಾಧ್ಯ? ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

RELATED ARTICLES

Related Articles

TRENDING ARTICLES