Monday, December 23, 2024

ಬಿರಿಯಾನಿ ತಿನ್ನಲು ಹಣವಿಲ್ಲ,350ರೂಪಾಯಿಗಾಗಿ ಯುವಕನನ್ನು 60ಕ್ಕೂ ಹೆಚ್ಚು ಬಾರಿ ಕತ್ತು ಕೊಯ್ದು16ರ ಹುಡುಗ

ನವದೆಹಲಿ: ಕೇವಲ 350 ರೂಪಾಯಿಗಾಗಿ ಬಾಲಕನೊಬ್ಬ ಯುವಕನನ್ನು ಕೊಲೆಗೈದು ಆತನ ಮೃತದೇಹದ ಬಳಿ ವಿಕೃತವಾಗಿ ಡ್ಯಾನ್ಸ್ ಮಾಡಿರುವ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಉತ್ತರ ದೆಹಲಿಯ ವೆಲ್ಕಮ್ ಏರಿಯಾದಲ್ಲಿ ಹಾದುಹೋಗುತ್ತಿದ್ದ ಯುವಕನೊಬ್ಬನ ಮೇಲೆ ಬಾಲಕ ದಾಳಿ ಮಾಡಿದ್ದಾನೆ. ಯುವಕ ಉಸಿರಾಡಲೂ ಸಾಧ್ಯವಾಗದಂತೆ ಬಿಗಿಯಾಗಿ ಹಿಡಿದುಕೊಂಡಿದ್ದಾನೆ. ಬಾಲಕನಿಂದ ಯುವಕ ತಪ್ಪಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಪ್ರಜ್ಞೆ ತಪ್ಪಿದ ಬಳಿಕ ತನ್ನಲ್ಲಿದ್ದ ಚಾಕುವಿನಿಂದ ಸುಮಾರು 60 ಬಾರಿ ಇರಿದಿದ್ದಾನೆ. ಅವನು ಸತ್ತ ಬಳಿಕ ಆತನ ಬಳಿಯಿದ್ದ 350 ರೂಪಾಯಿ ತೆಗೆದುಕೊಂಡಿದ್ದಾನೆ. ಮೃತದೇಹದ ಮುಂದೆ ಕೆಲಕಾಲ ವಿಕೃತವಾಗಿ ಡ್ಯಾನ್ಸ್ ಮಾಡಿದ್ದಾನೆ.

ಏನಿದು ಪ್ರಕರಣ?

ಪೊಲೀಸರಿಂದ ಬಂದಿರುವ ಮಾಹಿತಿ ಪ್ರಕಾರ, ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಮೃತನ ಕುತ್ತಿಗೆ, ಕಿವಿ ಮತ್ತು ಮುಖದ ಮೇಲೆ ಚಾಕು ದಾಳಿಯ ಗುರುತುಗಳಿವೆ. ಮೃತದೇಹದ ಮೇಲೆ 60ಕ್ಕೂ ಹೆಚ್ಚು ಬಾರಿ ಚಾಕು ಇರಿತದ ಗುರುತುಗಳಿವೆ. ಬುಧವಾರ ಬೆಳಿಗ್ಗೆ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆತನ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ದಾಳಿಯ ವೇಳೆ ಬಾಲಕ ಪಾನಮತ್ತನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮೃತನನ್ನು ಜಾಫ್ರಾಬಾದ್ ನಿವಾಸಿ ಎಂದು ಗುರುತಿಸಲಾಗಿದೆ.

ಬಿರಿಯಾನಿ ತಿನ್ನಲು ಹಣ ಕೇಳುತ್ತಿದ್ದ

ಜಂತಾ ಮದ್ದೂರ್ ಕಾಲೊನಿ ಬಳಿ ಸಂತ್ರಸ್ತ ಯುವಕನನ್ನು ಹಿಡಿದ ಆರೋಪಿಗಳು ಬಿರಿಯಾನಿ ತಿನ್ನಲು ಹಣ ಕೇಳಲಾರಂಭಿಸಿದ್ದಾರೆ. ಸಂತ್ರಸ್ತ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾನೆ. ಹೀಗಾಗಿ ಆರೋಪಿ ಕತ್ತು ಹಿಸುಕಲು ಯತ್ನಿಸಿದ. ಈ ವೇಳೆ ಆರೋಪಿ ಹಣ ದೋಚಲು ವಿಫಲನಾದಾಗ ಚಾಕುವಿನಿಂದ ದಾಳಿ ಮಾಡಿದ್ದಾನೆ. ಸದ್ಯ ಆರೋಪಿ ಪೊಲೀಸ್‌ ವಶದಲ್ಲಿದ್ದು, ತನಿಖೆ ನಡೆಯುತ್ತಿದೆ.

 

 

RELATED ARTICLES

Related Articles

TRENDING ARTICLES