Sunday, November 3, 2024

47 ಎಸೆತಗಳಲ್ಲಿ ವಿಧ್ವಂಸಕ ಶತಕ ಸಿಡಿಸಿದ ಇಂಗ್ಲಿಸ್

ಬೆಂಗಳೂರು : ಭಾರತ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಆಸ್ಟ್ರೇಲಿಯಾ ಬ್ಯಾಟರ್ ಜೋಷ್ ಇಂಗ್ಲಿಸ್ ವಿಧ್ವಂಶಕ ಶತಕ ಸಿಡಿಸಿದರು.

ಭಾರತೀಯ ಬೌಲರ್​ಗಳನ್ನು ಮನಬಂದಂತೆ ದಂಡಿಸಿದ ಇಂಗ್ಲಿಸ್ ಕೇವಲ 47 ಎಸೆತಗಳಲ್ಲಿ 8 ಭರ್ಜರಿ ಸಿಕ್ಸರ್ ಹಾಗೂ 9 ಬೌಂಡರಿಗಳ ನೆರವಿನೊಂದಿಗೆ 102 ರನ್​ ಚಚ್ಚಿದರು. ಇದು ಅವರ ಮೊದಲ (ಟಿ-20) ಅಂತರಾಷ್ಟ್ರೀಯ ಶತಕವಾಗಿದೆ.

ಭಾರತಕ್ಕೆ ಬೃಹತ್ ಟಾರ್ಗೆಟ್

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಬೃಹತ್ ಮೊತ್ತ ದಾಖಲಿಸಿತು. ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 208 ರನ್​ ಕಲೆಹಾಕಿತು. ಜೋಷ್ ಇಂಗ್ಲಿಸ್ 110, ಸ್ಟೀವನ್ ಸ್ಮಿತ್ 52, ಮ್ಯಾಥ್ಯೂ ಶಾರ್ಟ್ 13, ಮಾರ್ಕಸ್ ಸ್ಟೊಯಿನಿಸ್ 7, ಟಿಮ್ ಡೇವಿಡ್ 19 ರನ್ ಸಿಡಿಸಿದರು. ಭಾರತದ ಪರ ರವಿ ಬಿಷ್ಣೋಯಿ ಹಾಗೂ ಪ್ರಸಿದ್ಧ್ ಕೃಷ್ಣ ತಲಾ ಒಂದು ವಿಕೆಟ್ ಪಡೆದರು.

ಟಿ-20ಯಲ್ಲಿ ಆಸಿಸ್ ಪರ ದಾಖಲಾದ ಶತಕಗಳು

3 : ಗ್ಲೆನ್ ಮ್ಯಾಕ್ಸ್​ವೆಲ್

2 : ಆರನ್ ಫಿಂಚ್

1 : ಡೇವಿಡ್ ವಾರ್ನರ್

1 : ಶೇನ್ ವ್ಯಾಟ್ಸನ್

1 : ಜೋಶ್ ಇಂಗ್ಲಿಸ್

RELATED ARTICLES

Related Articles

TRENDING ARTICLES