Monday, December 23, 2024

ದೋಸ್ತ್​ಗೆ ಬಿಗ್ ರಿಲೀಫ್ ಕೊಟ್ಟ ಸಿಎಂ ಸಿದ್ದರಾಮಯ್ಯ : ಅಕ್ರಮ ಆಸ್ತಿ ಗಳಿಕೆ ಪ್ರಕರಣ ವಾಪಸ್

ಬೆಂಗಳೂರು : ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧದ ಅಕ್ರಮ ಹಣ (ಆಸ್ತಿ) ಗಳಿಕೆಯ ಪ್ರಕರಣವನ್ನು ಸಿಎಂ ಸಿದ್ದರಾಮಯ್ಯ ಸರ್ಕಾರ ವಾಪಸ್ ಪಡೆದಿದೆ.

2018ರ ಪ್ರಕರಣವನ್ನು ಈ ಹಿಂದಿನ ಬಿಜೆಪಿ ಸರ್ಕಾರ (ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ) ಸಿಬಿಐಗೆ ಒಪ್ಪಿಸಿತ್ತು. ಈ ಪ್ರಕರಣದ ಅನುಮತಿಯನ್ನು ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇಂದು ವಾಪಸ್ ಪಡೆದಿದೆ.

ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ಸಂಪುಟ ಸದಸ್ಯರೊಂದಿಗೆ ಸಿಎಂ ಸಿದ್ದರಾಮಯ್ಯ ಬರೋಬ್ಬರಿ 35 ನಿಮಿಷಗಳ ಕಾಲ ಪ್ರತ್ಯೇಕ ಮಾತುಕತೆ ನಡೆಸಿ ಅಂತಿಮವಾಗಿ ಈ ತೀರ್ಮಾನ ಕೈಗೊಂಡಿದ್ದಾರೆ. ಇದರೊಂದಿಗೆ ಡಿ.ಕೆ. ಶಿವಕುಮಾರ್​ ಅವರಿಗೆ ಕೊಂಚ ರಿಲೀಫ್ ಸಿಕ್ಕಂತಾಗಿದೆ ಎಂದು ಹೇಳಬಹುದು.

ನಾಳೆ ಅಥವಾ ಶನಿವಾರ ಆದೇಶ

ಹಿಂದಿನ ಬಿಜೆಪಿ ಸರ್ಕಾರ ಈ ಪ್ರಕರಣವನ್ನು ಸಿಬಿಐಗೆ ನೀಡಿತ್ತು. ಹಿಂದಿನ ಅಡ್ವೋಕೇಟ್ ಜನರಲ್ ಹಾಗೂ ನಮ್ಮ ಸರ್ಕಾರದ ಎಜಿ ಇಬ್ಬರ ಅಭಿಪ್ರಾಯ ಗಂಭೀರವಾಗಿ ಪರಿಗಣಿಸಲಾಗಿದೆ. ಸ್ಪೀಕರ್ ರಿಂದ ಪರವಾನಗಿ ಪಡೆದುಕೊಳ್ಳದೇ ನಿಯಮ ಬಾಹಿರವಾಗಿ ಅನುಮತಿಯಿಲ್ಲದೇ ತೆಗೆದುಕೊಂಡ ಕ್ರಮ ಆಗಿತ್ತು. ಕಾನೂನು ಪ್ರಕಾರ ಆಗ ಕ್ರಮ ಆಗಿರಲಿಲ್ಲ. ಹಳೆಯ ಎಜಿ ಈಗಿನ ಎಜಿ ಇಬ್ಬರ ಅಭಿಪ್ರಾಯ ಪರಗಣಿಸಿದ್ದೇವೆ. ಆದೇಶ ನಾಳೆಯೋ ನಾಡಿದ್ದೋ ನಿಮಗೆ ಸೇರುತ್ತದೆ. Its not in accordance with Law ಅಂತ ನಿರ್ಣಯಿಸಿದ್ದೇವೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಹೆಚ್​.ಕೆ. ಪಾಟೀಲ್ ಮಾಹಿತಿ ನೀಡಿದ್ದಾರೆ.

RELATED ARTICLES

Related Articles

TRENDING ARTICLES