Monday, December 23, 2024

ರಾಜ್ಯ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ರಜನೀಶ್ ಗೋಯಲ್ !

ಬೆಂಗಳೂರು: ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರನ್ನು ರಾಜ್ಯ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡಲಾಗಿದೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈ ಆದೇಶ ಹೊರಡಿಸಿದೆ. ಹಾಲಿ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರ ಅವಧಿ ಇದೇ ನವೆಂಬರ್​ 30ಕ್ಕೆ ಕೊನೆಗೊಳ್ಳಲಿದೆ. ಹೀಗಾಗಿ, ಇದೇ ನ. 29ಕ್ಕೆ ರಜನೀಶ್ ಗೋಯಲ್ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಗೋಯಲ್ ಅವರು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ: ಕಾರ್ಖಾನೆಯ ಬಾಯ್ಲರ್​ಗೆ ಸಿಲುಕಿ ಕಾರ್ಮಿಕ ದಾರುಣ ಸಾವು!

ರಜನೀಶ್ ಅವರು ಸೇವಾ ಜೇಷ್ಠತೆ ಆಧಾರದಲ್ಲಿ ಈ ಹುದ್ದೆಗೆ ನಿಯೋಜಿತ ಗೊಂಡಿದ್ದಾರೆ. 1986ರ ಬ್ಯಾಚ್‌ನ ಇವರ ಅಧಿಕಾರ ಅವಧಿ ಕೇವಲ ಏಳು ತಿಂಗಳವರೆಗ ಮುಂದುವರೆಯಲಿದೆ.

RELATED ARTICLES

Related Articles

TRENDING ARTICLES