Sunday, December 22, 2024

ಬೆಂಗಳೂರಿನಲ್ಲಿ ಸಿಲಿಂಡರ್​ ಸ್ಫೋಟ : ಐವರಿಗೆ ಗಾಯ

ಬೆಂಗಳೂರು : ಅಡುಗೆ ಮಾಡುವ  ಅನಿಲ(LPG Cylinder)ಸ್ಫೋಟಗೊಂಡು ಐವರು ಗಾಯಗೊಂಡಿರವ ಘಟನೆ ನಗರದ ವೀವರ್ಸ್ ಕಾಲೋನಿ ಸಮೀಪದ ಮಾರುತಿ ಬಡಾವಣೆಯಲ್ಲಿ ನಡೆದಿದೆ.

ಹೌದು, ಉತ್ತರ ಪ್ರದೇಶದ ಬನಾರಸ್ ಮೂಲದ ಜಮಾಲ್(32) ನಾಜಿಯಾ(22) ಇರ್ಫಾನ್ (21)ಗುಲಾಬ್(18) ಶಹಜಾದ್(9) ಗಾಯಗೊಂಡವರು.

ಘಟನೆಯ ವಿವರ

ಮಾರ್ಟಿನ್ ಎಂಬುವವರಿಗೆ ಸೇರಿದ ಮನೆಯಲ್ಲಿ ಕುಟುಂಬ ವಾಸವಾಗಿತ್ತು. ಆಡುಗೆ ಅನಿಲ ಸೋರಿಕೆ ಆಗಿರುವುದು  ತಿಳಿಯದೆ ಇಂದು ಮುಂಜಾನೆ 5:30 ರ ಸುಮಾರಿಗೆ ಲೈಟ್​ನ ಸ್ವಿಚ್ ಆನ್ ಮಾಡಿದಾಗ ಸಿಲಿಂಡರ್​ ಸ್ಫೋಟಗೊಂಡಿದೆ.

ಸ್ಪೋಟದ ತೀವ್ರತೆಗೆ ಮನೆಯ ಕಿಡಕಿ ಬಾಗಿಲುಗಳು ಛಿದ್ರಗೊಂಡಿವೆ. ಮನೆಯ ಮುಂಭಾಗ ನಿಲ್ಲಿಸಿದ್ದ ಕಾರಿನ ಗಾಜುಗಳು ಪುಡಿ ಪುಡಿಯಾಗಿವೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಕೋಣನಕುಂಟೆ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES