ಬೆಂಗಳೂರು: ಐತಿಹಾಸಿಕ ಬೆಂಗಳೂರು ಕಂಬಳಕ್ಕೆ ದಿನಗಣನೆ ಆರಂಭವಾಗಿದೆ. ನವೆಂಬರ್ 25 ಮತ್ತು 26 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಇದೇ ಮೊದಲ ಬಾರಿಗೆ ಕಂಬಳ ನಡೆಸಲಾಗುತ್ತಿದೆ. ಇದಕ್ಕಾಗಿ ಕಂಬಳದ ಕೆರೆಯನ್ನೂ ನಿರ್ಮಾಣ ಮಾಡಲಾಗಿದೆ.
ನೂತನವಾಗ ನಿರ್ಮಿಸಿರುವ ಕಂಬಳದ ಕೆರೆಯಲ್ಲಿ ಇಂದು ಪ್ರಾಯೋಗಿಕವಾಗಿ ಕೋಣಗಳನ್ನು ಓಡಿಸಲು ನಿರ್ಧರಿಸಲಾಗಿದೆ. ಮಧ್ಯಾಹ್ನ ಮೂರು ಗಂಟೆಗೆ 4 ರಿಂದ 5 ಜೊತೆ ಕೋಣಗಳನ್ನು ಓಡಿಸುವ ಮೂಲಕ ಕಂಬಳದ ಕೆರೆ ಪರೀಕ್ಷೆ ಮಾಡಲಾಗುತ್ತದೆ ಎಂದು ಕಂಬಳದ ಆಯೋಜಕರು ತಿಳಿಸಿದ್ದಾರೆ.
ಇದನ್ನೂ ಓದಿ: ಜಾತಿಗಣತಿ: ಡಿಕೆ ಶಿವಕುಮಾರ್ ಅತಿ ಬುದ್ದಿವಂತನಂತೆ ನಡೆದುಕೊಳ್ಳುತ್ತಿದ್ದಾರೆ- ಆರ್.ಅಶೋಕ್
ಕಂಬಳ ದಕ್ಷಿಣ ಕನ್ನಡ ಮತ್ತು ಕರಾವಳಿ ಜಿಲ್ಲೆಗಳ ಜನಪ್ರಿಯ ಕ್ರೀಡೆಯಾಗಿದೆ. ಕೆಸರುಗದ್ದೆಯಲ್ಲಿ ಜೋಡಿ ಕೋಣಗಳ ಓಟದ ಸ್ಪರ್ಧೆಯನ್ನು ಏರ್ಪಡಿಸುವುದು ಇದರ ವಿಶೇಷ. ರಾಜ್ಯದ ಉಳಿದ ಭಾಗದ ಜನರಿಗೆ ಕಂಬಳವನ್ನು ಪರಿಚಯಿಸುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲೂ ಕಂಬಳವನ್ನು ಏರ್ಪಡಿಸಲಾಗುತ್ತಿದೆ.