Monday, December 23, 2024

Bigg Boss Season 10 : ದೊಡ್ಮನೆಯಿಂದ ಹೊರಗೆ ಬಂದ್ರಾ ಸಂಗೀತ.?

ಬೆಂಗಳೂರು : ಬಿಗ್ ಬಾಸ್ ಮನೆಯಲ್ಲಿ ಆಗಾಗ ಒಂದೊಂದು ಟ್ವಿಸ್ಟ್ ಸಿಗುತ್ತಾ ಇರುತ್ತದೆ. ಇಂಟ್ರೆಸ್ಟಿಂಗ್ ಎನಿಸುವಂತ ಟಾಸ್ಕ್‌ಗಳನ್ನು ಆಡಿಸುತ್ತಾ ಇರುತ್ತಾರೆ .ಕೆಲವೊಂದು ಟಾಸ್ಕ್​ಗಳಲ್ಲಿ ಖುಷಿ ದುಃಖ ಎಲ್ಲವನ್ನೂ ಕೊಡುತ್ತದೆ. ಅಂದ್ರೆ ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 10′ ಶೋನಲ್ಲಿ ಸಂಗೀತಾ ಅವರು ಈ ಮನೆಯಿಂದ ಹೊರಗಡೆ ಹೋಗಬೇಕು ಅಂತ ಹೇಳಿದ್ದರು.

ಹೌದು, ಅದರಂತೆ ಮನೆಯ ಮುಖ್ಯದ್ವಾರ ಒಪನ್ ಆಗಿದೆ. ಆದರೆ ಸಂಗೀತಾ ಅವರು ನಿಜಕ್ಕೂ ಆಟದಿಂದ ಹೊರಗಡೆ ಉಳಿಯುತ್ತಾರಾ? ಮತ್ತೆ ಮನೆಗೆ ಹೋಗುತ್ತಾರಾ? ಸಂಗೀತಾ ತನ್ನ ಮನಸ್ಸನ್ನು ಬದಲಾಯಿಸುತ್ತಾರಾ ಎಂಬ ಪ್ರಶ್ನೆ ಎದ್ದಿದೆ. ಅದಕ್ಕೆ ಉತ್ತರ ಇಲ್ಲಿದೆ.

ತನ್ನ ಸ್ನೇಹಿತರಿಂದ ದೂರವಾಗಿ ವಿನಯ್ ತಂಡ ಸೇರಿಕೊಂಡಿದ್ದ ಸಂಗೀತಾ, ಕಾರ್ತಿಕ್‌ ತಲೆಬೋಳಿಸಿಕೊಳ್ಳುವ ಸವಾಲ್‌ ಕೂಡ ಹಾಕಿದ್ದರು. ಹಾಗೆಯೇ ತನಿಷಾ ಮೆಣಸಿನಕಾಯಿ ತಿನ್ನಲೂ ಕಾರಣರಾಗಿದ್ದರು.
ಸ್ನೇಹಿತರ ನೋವಿಗೆ ಕಾರಣರಾದ ಬಗ್ಗೆ ಅವರಲ್ಲಿ ಪಶ್ಚಾತ್ತಾಪ ಹುಟ್ಟಿದೆಯಾ? ಅದೇ ಅವರು ಮನೆಯಿಂದ ಹೊರಬರಲೂ ಕಾರಣವಾಯ್ತಾ? ಇಂಥದ್ದೊಂದು ಅನುಮಾನ JioCinema ಬಿಡುಗಡೆ ಮಾಡಿದ ಇಂದಿನ ಪ್ರೋಮೊ ನೋಡಿದರೆ ಹುಟ್ಟದೇ ಇರದು.

‘ನಾನು ನಾನಲ್ದೆ, ಬೇರೆ ಯಾರೋ ಆಗ್ತಿದೀನಿ ಅನಿಸ್ತಿದೆ’ ಎಂದು ಸಂಗೀತಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ತಲೆಯೊಳಗೆ ಪ್ರೆಷರ್ ಜಾಸ್ತಿ ಆಗ್ತಿದೆ ಎಂದು ಫ್ರೆಸ್ಟ್ರೇಟ್ ಆಗಿದ್ದಾರೆ. ಅವರನ್ನು ಸಮಾಧಾನ ಮಾಡಲು ಬಂದ ಕಾರ್ತಿಕ್‌ಗೆ ಕೈ ಮುಗಿದಿದ್ದಾರೆ. ಹಾಗೆಯೇ, ‘ನಿಮಗೆ ಬೇಕಾದಾಗ ಜಗಳ ಆಡ್ತೀರಾ. ಬೇಕಾದಾಗ ಸಮಾಧಾನ ಮಾಡ್ತೀರಾ?’ ಎಂದು ಕಾರ್ತಿಕ್ ಅವರನ್ನು ಕುಟುಕಿದ್ದಾರೆ. ಅದನ್ನು ಕೇಳಿ ಸಂಗೀತಾ ಬಳಿಯಿಂದ ಕಾರ್ತಿಕ್ ಎದ್ದು ಹೋಗಿದ್ದಾರೆ.

‘ನನಗೆ ಈ ಗೇಮ್ ಆಡಲು ಇಷ್ಟವಿಲ್ಲ’ ಎಂದು ಸಂಗೀತಾ ಬಿಗ್‌ಬಾಸ್ ಬಳಿಯಲ್ಲಿ ಬಿಕ್ಕಿ ಬಿಕ್ಕಿ ವಿನಂತಿಸಿಕೊಂಡಿದ್ದಾರೆ. ಅದರ ಬೆನ್ನಿಗೇ ಮನೆಯ ಮುಖ್ಯದ್ವಾರ ತೆರೆದುಕೊಂಡಿರುವ ದೃಶ್ಯವೂ ಪ್ರೋಮೊದಲ್ಲಿದೆ.

ಹಾಗಾದರೆ ಸಂಗೀತಾ ಮನೆಯಿಂದ ಹೊರಗೆ ಹೋದರಾ? ಅಥವಾ ಒಳಗೇ ಉಳಿದುಕೊಳ್ಳುತ್ತಾರಾ?ಈ ಕುತೂಹಲ ತಣಿಯಬೇಕು ಅಂದರೆ JioCinemaದಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್ ಕನ್ನಡದ ನೇರಪ್ರಸಾರವನ್ನು ವೀಕ್ಷಿಸಬೇಕು.

RELATED ARTICLES

Related Articles

TRENDING ARTICLES