Wednesday, January 8, 2025

ಪೊಲೀಸ್​ ಕಿರುಕುಳಕ್ಕೆ ಯುವಕ ಆತ್ಮಹತ್ಯೆ: ಇಬ್ಬರು ಪೊಲೀಸ್​ ಸಿಬ್ಬಂದಿ ಅಮಾನತು!

ಮೈಸೂರು: ಬಿಳಿಗೆರೆ ಪೊಲೀಸರ ಕಿರುಕುಳಕ್ಕೆ ಬೇಸತ್ತು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣ ಸಂಬಂಧ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಮೈಸೂರು SP ಸೀಮಾ ಲಾಟ್ಕರ್​ ಅಮಾನತು ಮಾಡಿದ್ದಾರೆ.

ನಂಜೇಶ್ ಹಾಗೂ ಪ್ರಸನ್ನಕುಮಾರ್ ಅಮಾನತುಗೊಂಡ ಸಿಬ್ಬಂದಿ. ಕರ್ತವ್ಯ ಲೋಪ ಅಡಿಯಲ್ಲಿ ಕ್ರಮಕ್ಕೆ ಆದೇಶಿಸಿದ್ದಾರೆ. ನವೆಂಬರ್​ 12 ರಂದು ಬಿಳಿಗೆರೆ ಪೊಲೀಸರು ಕಿರಣ್ ಕುಮಾರ್ ಎಂಬ ಯುವಕನನ್ನು ಠಾಣೆಗೆ ಕರೆದೊಯ್ದಿದ್ದರು. ಬಳಿಕ ಪೊಲೀಸರು ಕಿರಣ್​​ಗೆ ಕಿರುಕುಳ ನೀಡಿದ್ದರಂತೆ. ಪೊಲೀಸರ ಕಿರುಕುಳದಿಂದ ನೊಂದ ಯುವಕ ಪೊಲೀಸರಿಂದ ತಪ್ಪಿಸಿಕೊಂಡು ಮನೆಗೆ ಬಂದಿದ್ದ.

ಇದನ್ನೂ ಓದಿ: ನಾವೆಲ್ಲಾ ಮೀನುಗಾರ ಸಮುದಾಯದ ಪರವಾಗಿ ಇದ್ದೇವೆ. ನಿಮ್ಮ ಆಶೀರ್ವಾದ ನಮಗಿರಲಿ: ಸಿಎಂ ಸಿದ್ದರಾಮಯ್ಯ

ನವೆಂಬರ್​ 13 ರಂದು ನಂಜನಗೂಡು ತಾಲೂಕಿನ ನಗರ್ಲೆ ಗ್ರಾಮದಲ್ಲಿ ಪೊಲೀಸರ ಕಿರುಕುಳಕ್ಕೆ ಯುವಕ ಪೆಟ್ರೋಲ್ ಸುರಿದು ಆತ್ಮಹತ್ಯೆ ಮಾಡಿಕೊಂಡು ನನಗೆ ಪೊಲೀಸರು ಕಿರುಕುಳ ನೀಡಿದ್ದಾರೆ ಎಂದು ಕಿರಣ್​​ ಸಾಯುವ ಮುನ್ನ ಹೇಳಿದ್ದ ಎಂದು ತಿಳಿದುಬಂದಿದೆ.

RELATED ARTICLES

Related Articles

TRENDING ARTICLES