Wednesday, January 22, 2025

ನಿರಾಸೆಯಲ್ಲಿದ್ದ ಟೀಮ್ ಇಂಡಿಯಾ ಆಟಗಾರರಿಗೆ ಪ್ರಧಾನಿ ಮೋದಿ ಸ್ವಾಂತನ

ನವದೆಹಲಿ: ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ನಲ್‌ನಲ್ಲಿ ಸೋತ ನಂತರ ನಿರಾಶೆಯ ಮಡುವಿನಲ್ಲಿದ್ದ ಭಾರತ ತಂಡದ ಆಟಗಾರರಿಗೆ ಪ್ರಧಾನಿ ನರೇಂದ್ರ ಮೋದಿ ಸಾಂತ್ವನದ ಮಾತುಗಳನ್ನು ಆಡಿ ಧೈರ್ಯ ತುಂಬಿದ್ದಾರೆ.

ಈ ಕುರಿತು ರವೀಂದ್ರ ಜಡೇಜಾ ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಹಂಚಿಕೊಂಡಿದ್ದಾರೆ. ಭಾರತ ತಂಡದ ಆಟಗಾರರು ಸೋಲಿನ ಆಘಾತದಿಂದ ಮೌನಕ್ಕೆ ಶರಣಾಗಿದ್ದರು. ಈ ವೇಳೆ ಭಾರತ ತಂಡದ ಡ್ರೆಸಿಂಗ್ ರೂಮ್‌ಗೆ ಭೇಟಿಯಿತ್ತ ಮೋದಿ ಬಂದು ಟೂರ್ನಿಯಲ್ಲಿ ಉತ್ತಮವಾಗಿ ಆಡಿದೆವು ಫೈನಲ್‌ನಲ್ಲಿ ಸೋತಿದ್ದು, ಎಲ್ಲರೂ ಎದೆಗುಂದದಿದ್ದಾರೆ ಎಂದು ಸ್ವಾಂತನದ ಮಾತಗಳನ್ನಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಡ್ರೆಸಿಂಗ್ ರೂಮ್‌ಗೆ ಭೇಟಿ ನೀಡಿದ್ದು ವಿಶೇಷ ಮತ್ತು ಪ್ರೇರಣಾದಾಯಕವಾದುದು’ ಎಂದು ಜಡೇಜಾ ‘ಎಕ್ಸ್’ನಲ್ಲಿ ಮೋದಿ ಜೊತೆಗಿನ ಚಿತ್ರ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಇಂದು, ನಾಳೆ ಬೆಂಗಳೂರಿನ ವಿದ್ಯುತ್ ವ್ಯತ್ಯಯ

ಶಮಿ ಅವರೂ ಮೋದಿ ಜೊತೆಗಿನ ಚಿತ್ರವನ್ನು ಸಂದೇಶದೊಡನೆ ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿದ್ದಾರೆ. ಮೋದಿ ಅವರೂ ಭಾರತ ತಂಡಕ್ಕೆ ‘ಎಕ್ಸ್’ನಲ್ಲಿ ಸಂದೇಶ ನೀಡಿದ್ದಾರೆ. ‘ಪ್ರಿಯ ಟೀಮ್ ಇಂಡಿಯಾ, ನಿಮ್ಮ ಪ್ರತಿಭೆ ಮತ್ತು ದೃಢಸಂಕಲ್ಪ ಅಸಾಧಾರಣವಾದುದು. ತುಂಬಾ ಸ್ಫೂರ್ತಿಯಿಂದ ಆಡಿ, ದೇಶಕ್ಕೆ ಹೆಮ್ಮೆ ಮೂಡಿಸಿದ್ದೀರಿ. ನಾವು ಇಂದು ಮತ್ತು ಎಂದೆಂದೂ ನಿಮ್ಮ ಜೊತೆಗಿರುತ್ತೇವೆ’ ಎಂದು ಬರೆದಿದ್ದಾರೆ. ಮೋದಿ ಅವರ ನಡೆಯನ್ನು ಜಾಲತಾಣಗಳಲ್ಲಿ ಹಲವರು ಶ್ಲಾಘಿಸಿದ್ದಾರೆ.

 

RELATED ARTICLES

Related Articles

TRENDING ARTICLES