Wednesday, January 22, 2025

ನನ್ನ ಬ್ಲಡ್ JDS, ಅಧಿಕಾರ ಇಲ್ಲ ಅಂತ ನಾನು ಬೇರೆ ಪಕ್ಷಕ್ಕೆ ಹೋಗಿಲ್ಲ : ಇಬ್ರಾಹಿಂಗೆ ಶರವಣ ತಿರುಗೇಟು

ಬೆಂಗಳೂರು : ಜೆಡಿಎಸ್ ಮಾಜಿ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿಕೆಗೆ ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ ತಿರುಗೇಟು ನೀಡಿದ್ದಾರೆ. ನನ್ನ ಬ್ಲಡ್ JDS, ಅಧಿಕಾರ ಇಲ್ಲ ಅಂತ ನಾನು ಬೇರೆ ಪಕ್ಷಕ್ಕೆ ಹೋಗಿಲ್ಲ ಎಂದು ಕುಟುಕಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಾನು ಬೇರೆ ಪಕ್ಷದಿಂದ ಬಂದವನಲ್ಲ. ಕಳೆದ 25 ವರ್ಷದಿಂದ‌ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹಾಗೂ ಮಾಜಿ ಸಿಎಂ ಹೆಚ್.ಡಿ. ಕುಮಾಸ್ವಾಮಿ ಜೊತೆಗೆ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಚಾಟಿ ಬೀಸಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರ ಕೊಟ್ಟಿಲ್ಲ ಅಂತ ನಮ್ಮ ಪಕ್ಷಕ್ಕೆ ನೀವು ಬಂದ್ರಿ. ಪಕ್ಷದ ಅಧ್ಯಕ್ಷರಾಗಿದ್ದಾಗ ನಿಮ್ಮ ಗಮನಕ್ಕೆ ತಂದು ಎಲ್ಲಾ ಕೆಲಸವನ್ನು ಮಾಡುತ್ತಿದ್ರು. ಈಗ ಪಕ್ಷದಿಂದ ದೂರ ಇದ್ದು, ಹೀಗೆಲ್ಲ ಮಾತನಾಡ್ತೀರಾ? ನಾನೇ ಜೆಡಿಎಸ್ ಅಭ್ಯರ್ಥಿ ಅಂತ ಆವತ್ತು ನನ್ನ ಹೆಸರು ಘೋಷಣೆ ಮಾಡಿದ್ದು ನೀವೇ ಅಲ್ವಾ? ನಿಮ್ಮ ಬಾಯಿಂದ ಈ ರೀತಿಯ ಮಾತು ಬರುವುದು ಸರಿಯಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.

ಕುಮಾರಸ್ವಾಮಿ ನನ್ನ ಹೆಸರು ಹೇಳಿಲ್ಲ

ನಿಮ್ಮ ಮಗನನ್ನು ಹುಮನಾಬಾದ್ ಕ್ಷೇತ್ರದಿಂದ ಚುನಾವಣೆಗೆ ನಿಲ್ಲಿಸಲು ನನ್ನ ಬಳಿ ಹಣ ಕೇಳಿದ್ರಲ್ವಾ? ನಾನು ಹಣ ಕೊಟ್ಟಿದ್ದೆ, ಅದನ್ನು ಎಲ್ಲಾದರೂ ಹೇಳಿದ್ನಾ? ನಾನು ಇಬ್ರಾಹಿಂ ಮಗನಿಗೆ‌ ಚುನಾವಣೆ ನಿಲ್ಲಲು ಹಣ ಸಹಾಯ ಮಾಡಿದ್ದೇನೆ. ನಾನೇ ಇದನ್ನು ಬಹಿರಂಗವಾಗಿ ಹೇಳಿಕೊಂಡಿದ್ನಾ? ಕುಮಾರಸ್ವಾಮಿ ನನ್ನ ಹೆಸರು ಹೇಳಿಲ್ಲ. ಆದರೆ, ನೀವು ನನ್ನ ಹೆಸರು ಹೇಳಿದ್ದು ತಪ್ಪು. ಪಕ್ಷಕ್ಕೆ ನನ್ನ ಕೊಡುಗೆ ಇದೆ ಎಂದು ಶರವಣ ಗುಡುಗಿದ್ದಾರೆ.

RELATED ARTICLES

Related Articles

TRENDING ARTICLES