Wednesday, January 22, 2025

ಶಿವಮೊಗ್ಗಕ್ಕೆ ಆಗಮಿಸಿದ ಪ್ರಪ್ರಥಮ ಸ್ಟಾರ್ ಏರ್ ಲೈನ್ಸ್ ವಿಮಾನ !

ಶಿವಮೊಗ್ಗ: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಪ್ರಪ್ರಥಮ ಸ್ಟಾರ್ ಏರ್ ಲೈನ್ಸ್ ವಿಮಾನ ಹೈದರಾಬಾದ್​ ನಿಂದ ಶಿವಮೊಗ್ಗೆ ಬಂದಿಳಿದಿದೆ.

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಿದ ನೂತನ ಸ್ಟಾರ್​ ಏರ್ ಲೈನ್ಸ್​ ವಿಮಾನವನ್ನು ಸಂಸದ ಬಿ.ವೈ. ರಾಘವೇಂದ್ರ ಬರಮಾಡಿಕೊಂಡರು. ಬಳಿಕ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಸದ ರಾಘವೇಂದ್ರರಿಗೆ ಏರ್ಪೋರ್ಟ್ ಅಧಿಕಾರಿಗಳು, ಸ್ಥಳೀಯ ಕಾರ್ಪೋರೇಟರ್ ಗಳು ಸಾಥ್ ನೀಡಿದರು. ಶಾಸಕರಾದ ಎಸ್.ಎನ್. ಚನ್ನಬಸಪ್ಪ, ರುದ್ರೇಗೌಡ, ಡಿ.ಎಸ್. ಅರುಣ್ ಉಪಸ್ಥಿತರಿದರು.

ಇದನ್ನೂ ಓದಿ: HDK ಬಳಿ ಇರೋದು ಪೆನ್​ ಡ್ರೈವ್​ ಅಲ್ಲ, ಪೆನ್ಸಿಲ್ ಡ್ರೈವ್, ಎಲ್ಲಾ ಅಳಿಸಿ ಹೋಗಿದೆ: ಸಚಿವ…

ಸ್ಟಾರ್ ಏರ್​ ಲೈನ್ಸ್​ ವಿಮಾನವು ಗೋವಾ, ಹೈದರಾಬಾದ್, ತಿರುಪತಿ ಮಾರ್ಗವಾಗಿ ಸಂಚರಿಸಲಿವೆ. ಈಗಾಗಲೇ ಶಿವಮೊಗ್ಗ ಬೆಂಗಳೂರು ನಡುವೆ ಇಂಡಿಗೋ ವಿಮಾನ ಸಂಚರಿಸುತ್ತಿವೆ. ಇದರೊಂದಿಗೆ ಶಿವಮೊಗ್ಗ ಏರ್ಪೋರ್ಟ್​​ಗೆ ಮತ್ತೊಂದು ಸಂಸ್ಥೆ ವಿಮಾನ ಸೇರ್ಪಡೆಯಾಗಿದೆ.

RELATED ARTICLES

Related Articles

TRENDING ARTICLES