Saturday, January 11, 2025

ಶಿರಗುಪ್ಪಿ ಗ್ರಾಮ ಪಂಚಾಯ್ತಿಯಲ್ಲಿ ಎಣ್ಣೆ ಪಾರ್ಟಿ : ಸದಸ್ಯರ ವಿರುದ್ಧ ಕ್ರಮಕ್ಕೆ ಆಗ್ರಹ

ಬೆಳಗಾವಿ : ಗ್ರಾಮ ಪಂಚಾಯತಿಯಲ್ಲಿ ಎಣ್ಣೆ ಪಾರ್ಟಿ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ನಡೆದಿದೆ.

ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಗ್ರಾಮಸ್ಥರು ಪಂಚಾಯತಿಯಲ್ಲಿ ಎಣ್ಣೆ ಪಾರ್ಟಿ ಮಾಡಿದ್ದಾರೆ. ಶಿರಗುಪ್ಪಿ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಕಳೆದ ಭಾನುವಾರ ನವೆಂಬರ್ 12 ರಂದು ಪಂಚಾಯತಿಯಲ್ಲಿ‌ ಎಣ್ಣೆ ಪಾರ್ಟಿ ವಿಡಿಯೋ ವೈರಲ್​ ಆಗಿತ್ತು. ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಇತರ 4 ಜನ ಸೇರಿ ಮದ್ಯಪಾನ, ಧೂಮಪಾನ ಮಾಡಿ ಗಲಾಟೆ ಮಾಡಿದ್ದರು.

ಕಳೆದ ವಾರ ಎಣ್ಣೆ ಪಾರ್ಟಿ ನಡೆದರೂ ಯಾವ ಕ್ರಮವನ್ನೂ ತಾಲೂಕು ಆಡಳಿತ, ಜಿಲ್ಲಾಡಳಿತ ತಗೆದುಕೊಂಡಿಲ್ಲ. ಎಣ್ಣೆ ಪಾರ್ಟಿಯಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಪಂಡಿತ ಶಿವಾಜಿ ವಡ್ಡರ ಹಾಗೂ ರಾಮು ಕಾಂಬಳೆ ಭಾಗಿಯಾಗಿದ್ದರು. ಸರ್ಕಾರಿ ಕಚೇರಿ ದುರ್ಬಳಕೆ ಮಾಡಿದವರ ವಿರುದ್ಧ ಕ್ರಮಕ್ಕೆ ಅಗ್ರಹಿಸಲಾಗಿದೆ.

RELATED ARTICLES

Related Articles

TRENDING ARTICLES