Thursday, January 23, 2025

ದೆಹಲಿಯಲ್ಲಿ ಹೆಚ್ಚುತ್ತಲೇ ಇದೆ ಮಾಲಿನ್ಯ : ಏರ್ ಇಂಡೆಕ್ಸ್ ಕ್ವಾಲಿಟಿ 398 ರಷ್ಟು ದಾಖಲು

ದೆಹಲಿ : ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಾಲಿನ್ಯ ಪ್ರಮಾಣ ದಿನ ದಿನಕ್ಕೂ ಹೆಚ್ಚಾಗುತ್ತಲೇ ಇದೆ. ಮಂಗಳವಾರ ಬೆಳಗ್ಗೆ 8 ಗಂಟೆಯ ವೇಳೆಯಲ್ಲಿ ದೆಹಲಿಯನ್ನು ದಟ್ಟ ಹೊಗೆ ಆವರಿಸಿತ್ತು.

ನೂರು ಮೀಟರ್ ದೂರದವರೆಗೂ ದೃಷ್ಟಿಗೋಚರವಿರಲಿಲ್ಲ. ನಸುಕಿನಲ್ಲೂ 350 ರಿಂದ 400 ರವರೆಗೆ ಏರ್ ಕ್ವಾಲಿಟಿ ಇಂಡೆಕ್ಸ್​ ದಾಖಲಾಗಿದೆ. ಬೆಳಗ್ಗೆ 7 ಗಂಟೆಯ ವೇಳೆಯಲ್ಲಿ ಒಟ್ಟಾರೆ ದೆಹಲಿಯ ಏರ್ ಇಂಡೆಕ್ಸ್​ ಕ್ವಾಲಿಟಿ 398 ರಷ್ಟು ದಾಖಲಾಗಿದ ಎಂದು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.

ನಿನ್ನೆ ಸಂಜೆ 4 ಗಂಟೆಯ ವೇಳೆಯಲ್ಲಿ 348 ರಷ್ಟು ಏರ್ ಕ್ವಾಲಿಟಿ ಇಂಡೆಕ್ಸ್ ದಾಖಲಾಗಿತ್ತು. ಇಂದು ದೆಹಲಿಯ ಕೆಲವು ಬಡಾವಣೆಗಳಲ್ಲಿ 350ಕ್ಕಿಂತ ಹೆಚ್ಚು ಏರ್ ಕ್ವಾಲಿಟಿ ಇಂಡೆಕ್ಸ್​ ದಾಖಲಾಗಿದ್ದರೆ, ಇನ್ನು ಕೆಲವು ಬಡಾವಣೆಗಳಲ್ಲ ಸ್ವಲ್ಪ ಕಡಿಮೆ ದಾಖಲಾಗಿದೆ.

ದೆಹಲಿಯ ಕೆಲವು ಬಡಾವಣೆಗಳ AQI ಪ್ರಮಾಣ

ಆನಂದ ವಿಹಾರ- 375,ಅಶೋಕ್ ವಿಹಾರ- 361,ದ್ವಾರಕಾ ಸೆಕ್ಟರ್ 8- 389,ಐಜಿಐ ಟಿ 3- 353,ಐಟಿಓ- 320, ಜಹಾಂಗೀರಪುರಿ- 399, ದೆಹಲಿ ವಿವಿ ಉತ್ತರ ಕ್ಯಾಂಪಸ್- 347, ನಜಾಫ್ ಘರ್- 342, ಪಂಜಾಬ್ ಭಾಗ್- 413, ಆರ್.ಕೆ. ಪುರಂ- 372, ರೋಹಿಣಿ- 395, ಶಾದಿಪುರ- 345, ವಿವೇಕ್ ವಿಹಾರ- 354, ವಾಜಿರ್ ಪುರ- 396

RELATED ARTICLES

Related Articles

TRENDING ARTICLES