Sunday, May 12, 2024

ಕಾಂಗ್ರೆಸ್ ಅರೆಬರೆ, ವಿಫಲ ಗ್ಯಾರಂಟಿಗಳನ್ನು ಕೊಟ್ಟಿದೆ : ಆರ್. ಅಶೋಕ್

ಬೆಂಗಳೂರು : ಕಾಂಗ್ರೆಸ್​ ಸರ್ಕಾರ ಅರೆಬರೆ ಹಾಗೂ ವಿಫಲ ಗ್ಯಾರಂಟಿಗಳನ್ನು ಕೊಟ್ಟಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಕಿಡಿಕಾರಿದ್ದಾರೆ.

ಸರ್ಕಾರಕ್ಕೆ ಆರು ತಿಂಗಳು, ಸರ್ಕಾರದ ಸಾಧನೆಗಳ ಬಗ್ಗೆ ಸರ್ಕಾರಿ ಜಾಹೀರಾತು ವಿಚಾರ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಇವರ ಗ್ಯಾರಂಟಿಗಳು ಜನರಿಗೆ ತಲುಪಿಲ್ಲ, ವಿಫಲವಾಗಿವೆ ಎಂದು ಹೇಳಿದ್ದಾರೆ.

ಕಾಂಗ್ರೆಸ್​ನವರು ಜಾಹೀರಾತು ಕೊಟ್ಟು ಗ್ಯಾರಂಟಿಗಳಿಂದಾಗಿ ಫಲಾನುಭವಿಗಳು ಖುಷಿಯಾಗಿದ್ದಾರೆ ಅಂದಿದ್ದಾರೆ. ಜನ ಖುಷಿಯಾಗಿದ್ರೆ ಇನ್ನೂ ಯಾಕೆ ಕ್ಯೂನಲ್ಲಿ ನಿಂತುಕೊಳ್ಳುತ್ತಿದ್ದಾರೆ. ಸರ್ಕಾರ ಸಮರ್ಪಕ ವಿದ್ಯುತ್ ಕೊಡುತ್ತಿಲ್ಲ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮೃತರಿಗೆ ತಲಾ 25 ಲಕ್ಷ ಪರಿಹಾರ ಕೊಡಲಿ

ಕಾಡುಗೋಡಿ ವಿದ್ಯುತ್ ಅವಘಡ ಪ್ರಕರಣ ಸಂಬಂಧಿದಂತೆ ಪ್ರತಿಕ್ರಿಯಿಸಿದ ಅವರು, ತಾಯಿ ಮಗು ಸಾವಿಗೆ ಸರ್ಕಾರ ಕಾರಣ. ಇಂಧನ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಕೆಲಸ ಮಾಡಲಿ. ಮೃತರಿಗೆ ತಲಾ 25 ಲಕ್ಷ ಪರಿಹಾರವನ್ನು ಸರ್ಕಾರ ಕೊಡಲಿ ಎಂದು ಆರ್. ಅಶೋಕ್ ಒತ್ತಾಯ ಮಾಡಿದ್ದಾರೆ.

ಈ ಸುದ್ದಿ ಓದಿದ್ದೀರಾ? : ನೂರಕ್ಕೆ 90% ಭಾಗ ಎಲ್ಲ ಗ್ಯಾರಂಟಿ ಈಡೇರಿಸಿದ್ದೇವೆ : ಸಿಎಂ ಸಿದ್ದರಾಮಯ್ಯ

ಬರ, ರೈತರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ

ಕಲ್ಯಾಣ ಕರ್ನಾಟಕ ಭಾಗದಲ್ಲಿ ಬರದ ಛಾಯೆ ಇದೆ. ಸರ್ಕಾರ ಬರ ನಿರ್ವಹಣೆ ಮಾಡುವಲ್ಲಿ ವಿಫಲ ಆಗಿದೆ. ನಾನು ಬೀದರ್, ಕಲಬುರಗಿ ಜಿಲ್ಲೆಗಳಿಗೆ ಭೇಟಿ ಕೊಡ್ತೇನೆ. ಬರ ಪ್ರದೇಶಗಳ ವೀಕ್ಷಣೆ ಮಾಡಿ ರೈತರಿಂದ, ಅಧಿಕಾರಿಗಳಿಂದ ಮಾಹಿತಿ‌ ಪಡೆದುಕೊಳ್ತೇನೆ. ಸರ್ಕಾರ ಬರ, ರೈತರ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ನಾವೆಲ್ಲರೂ ಸರ್ಕಾರಕ್ಕೆ ಕ್ಲಾಸ್ ತಗೋಬೇಕಿದೆ. ಸಚಿವರು ಬರ ಪೀಡಿತ ಜಿಲ್ಲೆಗಳಿಗೆ ಭೇಟಿ ಕೊಡದೇ ನಿರ್ಲಕ್ಷ್ಯ ತಾಳಿದ್ದಾರೆ. ಅಧಿವೇಶನದಲ್ಲಿ ಬರ ವೈಫಲ್ಯ ಬಗ್ಗೆ ಚರ್ಚೆ ಮಾಡಿ ಸರ್ಕಾರಕ್ಕೆ ಚಾಟಿ ಬೀಸುತ್ತೇವೆ ಎಂದು ಕಿಡಿಕಾರಿದ್ದಾರೆ.

RELATED ARTICLES

Related Articles

TRENDING ARTICLES