Saturday, May 11, 2024

ನೂರಕ್ಕೆ 90% ಭಾಗ ಎಲ್ಲ ಗ್ಯಾರಂಟಿ ಈಡೇರಿಸಿದ್ದೇವೆ : ಸಿಎಂ ಸಿದ್ದರಾಮಯ್ಯ

ವಿಜಯಪುರ : ನಮ್ಮ ಸರ್ಕಾರ ಅಸಮಾನತೆ ತೊಲಗಿಸಲು ಅನೇಕ ಕಾರ್ಯಕ್ರಮ ಜಾರಿಗೆ ತಂದಿದೆ. ಹಿಂದೆ ಕೂಡಾ ನಾವು ಕೊಟ್ಟ ಭರವಸೆ ಇಡೇರಿಸಿದ್ದೇವೆ, ಈಗಲೂ ಅದನ್ನು ಇಡೇರಿಸುತ್ತೇವೆ. ನೂರಕ್ಕೆ 90% ಭಾಗ ಎಲ್ಲ ಬೇಡಿಕೆ ಈಡೇರಿಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ವಿಜಯಪುರದಲ್ಲಿ ಹಮ್ಮಿಕೊಂಡಿದ್ದ ಸಹಕಾರಿ ಸಪ್ತಾಹ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಡೀ ದೇಶದಲ್ಲಿ 12 ರಾಜ್ಯದಲ್ಲಿ ಬರಗಾಲವಿದೆ. 17 ಸಾವಿರದ 900 ಕೋಟಿ ಎನ್​ಡಿಆರ್​ಎಫ್ ನಾರ್ಮ್ಸ್ ಪ್ರಕಾರ ಬೇಡಿಕೆ ಕೊಟ್ಟಿದ್ದೇವೆ. ಆ ಹಣ ಬಿಡುಗಡೆ ಮಾಡಿಸುವ ಕೆಲಸ ಸಂಸದ ಜಿಗಜಿಣಗಿ ಅವರು ಮಾಡಬೇಕು. ರಾಜ್ಯ ಸರ್ಕಾರ 800 ಕೋಟಿ ಈಗಾಗಲೇ ಕುಡಿಯುವ ನೀರಿಗಾಗಿ ಬಿಡುಗಡೆ ಮಾಡಿದೆ. ಬರಗಾಲ ವನ್ನು ಸಮರ್ಥವಾಗಿ ನಿಭಾಯಿಸುತ್ತೇವೆ ಎಂದು ತಿಳಿಸಿದರು.

ರೈತರಿಗೆ ಸಕಾಲದಲ್ಲಿ ಸಾಲ ಸಿಗಬೇಕು

ಈ ಬಾರಿ ನಾನು ಬಜೆಟ್ ಮಂಡಿಸಿದ ವೇಳೆ 0% ಸಾಲವನ್ನು 3 ಲಕ್ಷದಿಂದ 5 ಲಕ್ಷದವರೆಗೆ ಏರಿಸುವ ಕೆಲಸ ಮಾಡಿದ್ದೇವೆ. ಪ್ರಧಾನಿ ಮೋದಿ ಅವರಿಗೆ ಹಾಗೂ ನಬಾರ್ಡ್ ನವರಿಗೂ ಸಾಲ ಕೊಡುವಂತೆ ಪತ್ರ ಬರೆಯುತ್ತೇನೆ. ರೈತರಿಗೆ ಸಕಾಲದಲ್ಲಿ ಸಾಲ ಸಿಗಬೇಕು. ನೆಹರು ಅವರು ಸಹಿತ ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಒತ್ತನ್ನು ಕೊಟ್ಟಿದ್ದಾರೆ ಎಂದು ಹೇಳಿದರು.

ಡಿಸಿಸಿ ಬ್ಯಾಂಕ್ ಆರ್ಥಿಕವಾಗಿ ಸುಸ್ಥಿರವಾಗಿದೆ

ಸಹಕಾರಿ ಕ್ಷೇತ್ರ ಹೆಚ್ಚಿನ ಸೇವೆ ಮಾಡುವ ಕ್ಷೇತ್ರವಾಗಿದೆ. ಯಾರಿಗೆ ಒಳ್ಳೆಯ ನಾಯಕತ್ವ ಇರುತ್ತದೋ ಅಲ್ಲಿನ ಸಹಕಾರಿ ಬೆಳೆಯಲು ಸಾಧ್ಯ. ವಿಜಯಪುರದ ಡಿಸಿಸಿ ಬ್ಯಾಂಕ್ ಆರ್ಥಿಕವಾಗಿ ಸುಸ್ಥಿರವಾಗಿದೆ ಎಂದು ಮೇಲ್ನೋಟಕ್ಕೆ ಕಾಣುತ್ತದೆ. ಸಹಕಾರಿ ತತ್ವದ ಮೇಲೆ ಜಾಗೃತಿ ಬಂದು ಸಮಾಜವನ್ನು‌ ಕಟ್ಟುವ ಕೆಲಸ ಮಾಡಬೇಕಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

RELATED ARTICLES

Related Articles

TRENDING ARTICLES