Monday, December 23, 2024

ನಿನ್ನೆ ನಮ್ಮ ದಿನವಾಗಿರಲಿಲ್ಲ, ನಾವು ಬಲವಾಗಿ ಹಿಂತಿರುಗುತ್ತೇವೆ : ಶಮಿ ಭಾವನಾತ್ಮಕ ಟ್ವೀಟ್

ಬೆಂಗಳೂರು : ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್-2023 ಫೈನಲ್ ಪಂದ್ಯದ ಸೋಲಿನ ಬಳಿಕ ಭಾವುಕರಾದ ಭಾರತದ ಸ್ಟಾರ್ ವೇಗಿ ಮೊಹಮ್ಮದ್ ಶಮಿಗೆ ಪ್ರಧಾನಿ ನರೇಂದ್ರ ಮೋದಿ ಸಾಂತ್ವನ ಹೇಳಿದ್ದಾರೆ.

ಬಳಿಕ, ಶಮಿ ಎಕ್ಸ್​​ನಲ್ಲಿ ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ. ‘ನಿನ್ನೆ ನಮ್ಮ ದಿನವಾಗಿರಲಿಲ್ಲ, ನಾವು ಬಲವಾಗಿ ಹಿಂತಿರುಗುತ್ತೇವೆ’ ಎಂದು ಮತ್ತೆ ಪುಟಿದೇಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ದುರಾದೃಷ್ಟವಶಾತ್ ನಿನ್ನೆ ನಮ್ಮ ದಿನವಾಗಿರಲಿಲ್ಲ. ವಿಶ್ವಕಪ್-2023 ಟೂರ್ನಿಯುದ್ದಕ್ಕೂ ನನ್ನನ್ನು ಹಾಗೂ ನಮ್ಮ ತಂಡವನ್ನು ಬೆಂಬಲಿಸಿದ ಎಲ್ಲಾ ಭಾರತೀಯರಿಗೆ ಧನ್ಯವಾದಗಳು. ಡ್ರೆಸ್ಸಿಂಗ್ ರೂಂಗೆ ಬಂದು ನಮಗೆ ಸ್ಫೂರ್ತಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶೇಷ ಧನ್ಯವಾದಗಳು. ನಾವು ಬಲವಾಗಿ ಹಿಂತಿರುಗುತ್ತೇವೆ’ ಎಂದು ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.

ವಿಶ್ವಕಪ್​ನಲ್ಲಿ ಬೊಂಬಾಟ್ ಪ್ರದರ್ಶನ

ವಿಶ್ವಕಪ್​-203 ಟೂರ್ನಿಯಲ್ಲಿ 7 ಪಂದ್ಯ ಆಡಿರುವ ಮೊಹಮ್ಮದ್ ಶಮಿ 24 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್​ಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ನ್ಯೂಜಿಲೆಂಡ್ ವಿರುದ್ಧ 5, ಇಂಗ್ಲೆಂಡ್ ವಿರುದ್ಧ 4, ಶ್ರೀಲಂಕಾ ವಿರುದ್ಧ 5, ದಕ್ಷಿಣ ಆಫ್ರಿಕಾ ವಿರುದ್ಧ 2, ನ್ಯೂಜಿಲೆಂಡ್ ವಿರುದ್ಧ 7 ವಿಕೆಟ್ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಒಂದು ವಿಕೆಟ್ ಪಡೆದಿದ್ದಾರೆ.

RELATED ARTICLES

Related Articles

TRENDING ARTICLES